ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮೈಸೂರು ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ ಅವರನ್ನು ಕರ್ನಾಟಕ ರಾಜ್ಯ ಶಿಳ್ಳೇಕ್ಯಾತರ ಪರಿಶಿಷ್ಟ ಜಾತಿ ಅಭಿವೃದ್ಧಿ ಸಂಘದ ಮುಖಂಡರು ಭೇಟಿ ಮಾಡಿ ‘ ಕುಲ ಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ‘ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಶಿಳ್ಳೇಕ್ಯಾತರ ಪರಿಶಿಷ್ಟ ಜಾತಿ ಅಭಿವೃದ್ಧಿ ಸಂಘದ ಮುಖಂಡರಿಂದ ಪರಿಶಿಷ್ಟ ಜಾತಿಯ ಪರ್ಯಾಯ ಪದಗಳಾದ ‘ ಕಿಳ್ಳೇಕ್ಯಾತರ, ಕಟುಬ, ಕಟುಬರ, ಬುಂಡೆ ಬೆಸ್ತ, ಜಲಗಾರ ‘ ಜಾತಿಗಳನ್ನು ಕುರಿತು ಡಾ. ಎಂ. ಆರ್. ಗಂಗಾಧರ್ ಅವರು ಮಾಡಿರುವ ಕುಲ ಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿಮಾಡುವಂತೆ ಅಹವಾಲನ್ನು ಸಂಘಟನೆಯ ಮುಖಂಡರು ಸಚಿವರಿಗೆ ನೀಡಿದರು.

ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಮಾತನಾಡಿ ‘ ಕುಲ ಶಾಸ್ತ್ರೀಯ ಅಧ್ಯಯನ ವರದಿ ಕುರಿತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಹಿರಿಯ ಸಲಹೆಗಾರರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ‘ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಜನನ, ಮರಣ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ : ಶಿಲ್ಪಾ ನಾಗ್ ಸೂಚನೆ

ಭೇಟಿ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ನಾಗಪ್ಪ, ಗೌರವ ಅಧ್ಯಕ್ಷರುಗಳಾದ ಡಾ. ಸಣ್ಣವೀರಣ್ಣ ದೊಡ್ಡಮನಿ, ಪಿ. ರಾಮಯ್ಯ, ಮಹೆಂದರ್ ರಾವ್ ಸಾಸನಿಕ್, ಮುಖಂಡರಾದ ವಿಲಾಶ್ ಕುಮಾರ್ ಸಿಂಧೆ, ಪುಡ್ಲಿಕಪ್ಪ ಕಿಳ್ಳೇಕ್ಯಾತರ, ಹುಣಸೂರು ಸಣ್ಣಸ್ವಾಮಿ, ರಾಜಣ್ಣ, ಶಿವಣ್ಣ, ಅಣ್ಣಪ್ಪ ಸೇರಿದಂತೆ ಹಲವರು ಇದ್ದರು.