ಇಂದು ದಿನಾಂಕಃ 21-ಜೂನ್ -2025 ರ ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆರವರು ಶಿವಮೊಗ್ಗ ನಗರದ PES ಕಾಲೇಜಿನಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾಲೇಜು ವಿಧ್ಯಾರ್ಥಿಗಳ ಕುರಿತು ಈ ಕೆಳಕಂಡತೆ ಮಾಹಿತಿ ನೀಡಿದರು.
ಸುರಕ್ಷತೆಯ ದೃಷ್ಠಿಯಿಂದ ಕಡ್ಡಾಯವಾಗಿ ಎಲ್ಲರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಬಾರದು ಹಾಗೂ ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಪಡೆದ ನಂತರವೇ ವಾಹನ ಚಾಲನೆ ಮಾಡಿ ಎಂದು ತಿಳಿಸಿದರು.

ರಸ್ತೆಯಲ್ಲಿ ನಡೆದು ಹೋಗುವಾಗ ಕಡ್ಡಾಯವಾಗಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿ.ರಸ್ತೆ ದಾಟುವಾಗ ರಸ್ತೆಯ ಎರಡು ಕಡೆ ನೋಡಿ ಯಾವುದೇ ವಾಹನ ಬರುತ್ತಿಲ್ಲವೆಂದು ಖಚಿತ ಪಡಿಸಿಕೊಂಡು ಆ ನಂತರವೇ ರಸ್ತೆ ದಾಟಿ ಎಂದು ಮಾಹಿತಿ ನೀಡಿದರು.
ಬೈಕ್ ನಲ್ಲಿ ಥ್ರಿಬ್ಬಲ್ ರೈಡಿಂಗ್, ವೀಲಿಂಗ್ ಮತ್ತು ರೇಸಿಂಗ್ ಮಾಡಬೇಡಿ. ಇದು IMV ಕಾಯ್ದೆ ರೀತ್ಯ ಅಪರಾಧ ವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ವಿಭಾಗ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
