ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಅಮರಾವತಿಯ ಸರ್ಕಾರಿ ಉನ್ನತಿಕರಿಸಿದ ಶಾಲೆಯ ಇಂದಿನ ದುಸ್ಥಿತಿ ಬೇಸರ ತರಿಸುವಂತಿದೆ. ಮಳೆ ಬಂದರೆ ಸೋರುವ ಕೊಠಡಿಯ ಚಾವಣಿಗಳು, ಮಳೆಗೆ ಬೀಳುವಂತಿರುವ ಹಂಚಿನ ಚಾವಣಿ ಇರುವ ಕೊಠಡಿ, ಇನ್ನೊಂದು ಕೊಠಡಿ ಪಾಳುಬಿದ್ದು ಪ್ರಾಣಿಗಳ ವಾಸಸ್ಥಾನವಾಗಿದೆ ಎಂದು ಶಿಕ್ಷಣಾಸಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಶಾಲೆ 1951ರಲ್ಲಿ ನಿರ್ಮಾಣಗೊಂಡಿದ್ದು, ಬಡವರ್ಗದ, ದಲಿತ, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ಸುಮಾರು 60 ಮಕ್ಕಳು ವಿದ್ಯೆ ಕಲಿಯುತ್ತಿದ್ದು, ಶಾಲೆಯ ದುರವಸ್ಥೆ ಪೋಷಕರಲ್ಲಿ ಆತಂಕ ತರಿಸಿದೆ.

“ಕೊಠಡಿಗಳು ಮಳೆ ಬಂದರೆ ಸೋರುತ್ತಿದ್ದು, ಹಂಚು ಬೀಳುವ ಸ್ಥಿತಿಯಲ್ಲಿರುವ ಇದ್ದರೆ, ಇನ್ನೊಂದು ಕೊಠಡಿ ಸಂಪೂರ್ಣ ಹಾಳಾಗಿ ಹಂದಿ, ನಾಯಿಗಳ, ವಿಷಜಂತುಗಳ ವಾಸಸ್ಥಾನವಾಗಿದೆ. ಶಾಲೆಗೆ ಕಾರ್ಯಕ್ರಮ ನಡೆಸಿಕೊಡಲುರಂಗಮಂದಿರವಿದ್ದು, ಈ ಸಭಾಂಗಣ ಕೂಡ ಯೋಗ್ಯವಲ್ಲದ ಮುರಿದು ಹೋಗಿರುವ ಸಿಮೆಂಟ್ ಚಾವಣಿಗಳಿಂದ ಪಾಳು ಬಿದ್ದು ನಿರುಪಯುಕ್ತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಹೆಚ್ಚಾಗಿ ದಲಿತರ ಕೂಲಿ ಕಾರ್ಮಿಕರ ಅಲ್ಪಸಂಖ್ಯಾತರ ಮಕ್ಕಳೇ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ. ಈ ಶಾಲೆಯ ದುಸ್ಥಿತಿಯನ್ನು ಕಂಡು ಶಿಕ್ಷಣ ವ್ಯವಸ್ಥೆ ಬಗ್ಗೆ ಆತಂಕ ಬರುತ್ತಿದೆ. ಈ ರೀತಿ ಇದ್ದರೆ ಶಾಲೆಗಳಿಗೆ ಬರಲು ಮಕ್ಕಳು ಕೂಡ ಹೆದರಿಕೆಕೊಳ್ಳುತ್ತಾರೆ. ಇದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳ ಕಣ್ಣಿಗೆ ಬಿದ್ದರೂ ಬೀಳದಂತೆ ಅಸಡ್ಡೆ ವಹಿಸುತ್ತಾರೆ. ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವಾಗಿದೆ. ಕೂಡಲೇ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾಡಳಿತ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ತುರ್ತಾಗಿ ದುರಸ್ಥಿ ಕಾಮಗಾರಿ ಕೈಗೊಂಡು ಪಠ್ಯ ಚಟುವಟಿಕೆ ಕೈಗೊಳ್ಳಲು ಅನುಕೂಲ ಮಾಡಿ ಕೊಡಬೇಕು” ಎಂದು ಶಿಕ್ಷಣ ಪ್ರೇಮಿ ಲಿಂಗರಾಜ್ ಗಾಂಧಿನಗರ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮೇಲ್ವರ್ಗದ ಮಹಿಳೆ ಅಥವಾ ದಲಿತ ಮಹಿಳೆ ಆಗಿರಲಿ ಸಮಾಜದಲ್ಲಿ ಅಸ್ಪೃಶ್ಯರಷ್ಟೇ ಶೋಷಿತರು; ಪ್ರೊ. ಎ ಬಿ ರಾಮಚಂದ್ರಪ್ಪ