ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಮೆರಿಕಾ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು. ಈ ನಿರ್ಧಾರವನ್ನು ಖಂಡಿಸಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದ ಎರಡೇ ದಿನಗಳಲ್ಲಿ ಅವರಿಗೆ ಅಮೆರಿಕ ಪ್ರವಾಸ ನಿರ್ಬಂಧ ತೆರವು ಮಾಡಲಾಗಿದೆ.
ಕೇಂದ್ರ ಸರ್ಕಾರ ಈ ಬಗ್ಗೆ ಮರು ಆದೇಶ ಹೊರಡಿಸಿದ್ದು, ಈ ಬಗ್ಗೆ ಸ್ವತಃ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಜೊತೆಗೆ ಇದೆ ವೇಳೆ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಜೂನ್ 14ರಿಂದ 27ರವರೆಗೆ ಬೋಸ್ಟನ್ ಬಯೋ 2025 ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಈ ವರ್ಷದ ಆಟೋಮೇಶನ್ ಕಾನ್ನರೆನ್ಸ್ ನಲ್ಲಿ ಭಾಗವಹಿಸಲು ಖರ್ಗೆ ಅಮೆರಿಕಕ್ಕೆ ಭೇಟಿ ನೀಡಬೇಕಿತ್ತು. ಆದರೆ ಪ್ರಿಯಾಂಕ್ ಫ್ರಾನ್ಸ್ ನಲ್ಲಿ ಇದ್ದ ವೇಳೆ ಅಮೆರಿಕ ಭೇಟಿ ಅನುಮತಿಯನ್ನು ಕೇಂದ್ರ ನಿರಾಕರಿಸಿತ್ತು.
“ನನ್ನ ಅಮೆರಿಕ ಪ್ರವಾಸ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಯೂ ಟರ್ನ್ ತೆಗೆದುಕೊಂಡಿದ್ದು, ಮೊದಲಿನ ನಿರ್ಧಾರವನ್ನು ಹಿಂಪಡೆದು, ಭೇಟಿಗೆ ಅನುಮತಿ ನೀಡಿದೆ” ಎಂದು ಶನಿವಾರ ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
“ಅಮೆರಿಕ ಭೇಟಿಗಾಗಿ ಮೇ 15ರಂದು ಅನುಮತಿ ಕೇಳಲಾಗಿತ್ತು. ಆದರೆ ಪತ್ರಿಕಾಗೋಷ್ಠಿ ನಡೆಸಿ ಆಕ್ಷೇಪ ಎತ್ತಿದ ಬೆನ್ನಲ್ಲೇ ಜೂನ್ 19ರಂದು ಕೇಂದ್ರದಿಂದ ಆಕ್ಷೇಪಣೆ ಇಲ್ಲ ಎಂಬ ಪತ್ರ ಸ್ವೀಕರಿಸಿರುವುದಾಗಿ ಪ್ರಿಯಾಂಕ್ ಖರ್ಗೆ ಮಾಹಿತಿ ನಡಿದ್ದಾರೆ.
“ಸ್ಪಷ್ಟ ಕಾರಣ ನೀಡದೇ ಅನುಮತಿ ನಿರಾಕರಿಸಿದ್ದಕ್ಕೆ ರಾಜಕೀಯ ಕಾರಣ ಅಲ್ಲದೆ ಇನ್ನೇನಿರಲು ಸಾಧ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರು. ಸಚಿವ ಜೈಶಂಕರ್ ಅವರಿಗೆ 2 ಪುಟಗಳ ಪತ್ರ ಬರೆದು ಔಪಚಾರಿಕ ಸ್ಪಷ್ಟಿಕರಣ ನೀಡಬೇಕೆಂದು ಪ್ರಿಯಾಂಕ್ ಒತ್ತಾಯಿಸಿದ್ದರು.