ಬಜ್ಪೆಯ ಮರವೂರಿನಲ್ಲಿ ಬಡ ದಲಿತ ಯುವಕ ಕೀರ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದಾಗ ದ್ಚನಿಎತ್ತದೆ, ದೊಡ್ಡ ವಿಷಯ ಮಾಡದೇ ಸುಮ್ಮನಿದ್ದಿರಲ್ಲಾ ಈ ಅಮಾಯಕ ದಲಿತ ಯುವಕ ಹಿಂದು ಅಲ್ವೇ ? ಕೊಲೆಯಲ್ಲೂ ಅಸ್ಪೃಶ್ಯತೆ ಮಾಡತ್ತಿರಲ್ಲಾ ಇದು ಸಂವಿಧಾನ ಬಾಹಿರ ಅಲ್ವೇ ? ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಗೆ ಪ್ರಶ್ನಿಸಿದ್ದಾರೆ.
ಕೇವಲ ಮುಸ್ಲಿಮರಿಗೆ ಅದೂ ವಸತಿ ಯೋಜನೆಯಲ್ಲಿ ಹದಿನೈದು ಶೇಖಡ ಮೀಸಲಾತಿ ಕಲ್ಪಿಸಿದ್ದು ಮಾತ್ರವೇ ಸಂವಿಧಾನ ಬಾಹಿರ ಎಂದು ಹೇಳಿರುವ ಕಾರ್ಕಳ ಶಾಸಕ ಸುನೀಲ್ ಕುಮಾರಗ ಹೇಳಿಕೆಗೆ ತಿರುಗೇಟು ನೀಡಿದ ಶಾಮ್ ರಾಜ್ ಬಿರ್ತಿಯವರು ಶತಶತಮಾನಗಳಿಂದ ಈ ದೇಶದ ಸರ್ವ ಸವಲತ್ತುಗಳನ್ನು ಅನುಭವಿಸಿದ, ಶೇಖಡಾ 60ಕ್ಕೂ ಮಿಕ್ಕಿ ದೇಶದ ಪ್ರಮುಖ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರ ಹುದ್ದೆಗಳನ್ನು ಅಲಂಕರಿಸಿರುವ, ದೇಶದ ಜನಸಂಖ್ಯೆಯ ಕೇವಲ ಮೂರು ಶೇಖಡಾ ಇರುವ ಮೇಲ್ವರ್ಗದ ಬ್ರಾಹ್ಮಣರಿಗೆ ಹತ್ತು ಶೇಖಡಾ ಮೀಸಲಾತಿ ಕೊಟ್ಟರಲ್ಲಾ ಇದು ಸಂವಿಧಾನ ಬಾಹಿರ ಅನಿಸಲಿಲ್ವೇ ?
ಕಾರ್ಕಳ ಪರುಶರಾಮ ಥೀಂ ಪಾರ್ಕ್ ನಲ್ಲಿ ತಮ್ಮ ಉಸ್ತುವಾರಿಯಲ್ಲೇ ಉದ್ಘಾಟನೆಗೊಂಡ ಕಂಚಿನ ಮೂರ್ತಿ, ಕೊನೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಲೇಪಿತ ಮೂರ್ತಿ ಎಂದು ಸಾಬೀತಾಗಿ ಈಗ ಕಾನೂನು ಪ್ರಕ್ರಿಯೆ ನಡೆಯುತ್ತಿದೆಯಲ್ಲ, ಇದು ಕಾನೂನು ಬಾಹಿರ ಅಥವಾ ಸಂವಿಧಾನ ಬಾಹಿರ ಅಲ್ವೇ ?
ಕೇವಲ ಮುಸ್ಲಿಮರಿಗೆ ಅದೂ ವಸತಿ ಯೋಜನೆಯಲ್ಲಿ ಹದಿನೈದು ಶೇಖಡ ಮೀಸಲಾತಿ ಕಲ್ಪಿಸಿದ್ದು ಮಾತ್ರವೇ ಸಂವಿಧಾನ ಬಾಹಿರವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.