ಕೊಪ್ಪಳದ ಬಲ್ಡೋಟಾ ವಿಸ್ತರಣೆ ಹಾಗೂ ಬಿಎಸ್‌ಪಿಎಲ್, ಎಮ್‌ಎಸ್‌ಪಿಎಲ್ ಕಾರ್ಖಾನೆಗಳು ತೊಲಗುವವರೆಗೂ ಹೋರಾಟ ನಿಲ್ಲಿಸುವುದು ಬೇಡ, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸಂಸದ ಕೆ ರಾಜಶೇಖರ್ ಹಿಟ್ನಾಳ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆಯ ಆಹ್ವಾನದ ಮೇರೆಗೆ ಕಾರ್ಖಾನೆಗಳ ವಿರುದ್ಧ ಹೋರಾಟದ ಬಗ್ಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, “ಕಾರ್ಖಾನೆಗಳ ಹೊಗೆ ಹಾಗೂ ಧೂಳಿನಿಂದ ಈಗಾಗಲೇ 25-30 ಹಳ್ಳಿಗಳ ಪರಿಸರ ನಾಶ ಆಗಿ ಅಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಕೊಪ್ಪಳ ಇರಬೇಕು ಇಲ್ಲವೇ ಬಲ್ಡೋಟಾ ಕಾರ್ಖಾನೆ ಇರಬೇಕು. ಈ ಹೋರಾಟ ಹೀಗೆ ಮುಂದುವರೆಯಲಿ, ಇದಕ್ಕೆ ಶಾಸಕರು ಹಾಗೂ ನಾನು ಸಂಪೂರ್ಣವಾದ ಬೆಂಬಲ ಕೊಡುತ್ತೇವೆ” ಎಂದರು.
ಜನಪ್ರತಿನಿಧಿಗಳೊಂದಿಗೆ ಸಂವಾದ ಮಾಲಿಕೆಯಲ್ಲಿ ಮುಂದೆ ಶಾಸಕ ರಾಘವೇಂದ್ರ ಹಿಟ್ನಾಳ್ ಅವರೊಡನೆ ಜಂಟಿ ಹೋರಾಟ ಸಮಿತಿಯಿಂದ ಸಂವಾದ ನಡೆಸಲಾಗುವುದು. ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳು ಸರ್ಕಾರದಿಂದ
ಬಲ್ಡೋಟಾ ಕಂಪನಿ ವಿಸ್ತರಣೆ ಮಾಡದಂತೆ ಪತ್ರ ತರಬೇಕೆಂದು ಕೊಪ್ಪಳ ಜನತೆಯ ಪರವಾಗಿ ಆದೇಶಿಸಿದ್ದರು. ಸರಕಾರದಿಂದ ತಾತ್ಕಾಲಿಕ ತಡೆ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ತಡೆ ನೀಡಬೇಕೆಂಬುದು ನಾಗರಿಕರ ಕೋರಿಕೆಯಾಗಿದೆ. ಸ್ವಾಮಿಗಳು ಜನಪ್ರತಿನಿಧಿಗಳನ್ನು ಈ ಹಿನ್ನೆಲೆಯಲ್ಲಿ ಪ್ರಶ್ನಿಸಬೇಕೆಂದು ಜನತೆಯ ಆಶಯವಾಗಿದೆ. ಎಂದು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ಸಮಿತಿ ವೇದಿಕೆ ಅಭಿಪ್ರಾಯಕ್ಕೆ ಬರಲಾಯಿತು.
ಇದನ್ನೂ ಓದಿ: ಕೊಪ್ಪಳ | ಕನಕೊಪ್ಪ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಎಸ್‌ಎಫ್‌ಐ ಆಗ್ರಹ
ಅಲ್ಲಮಪ್ರಭು ಬೆಟ್ಟದೂರು, ಬಸವರಾಜ್ ಶೀಲವಂತರ, ಡಿಎಮ್ ಬಡಿಗೇರ, ಮಹಾಮತೇಶ ಕೊತಬಾಳ, ಕೆ.ಬಿ ಗೊನಾಳ ಶರಣು ಶೆಟ್ಟರ, ಶರಣು ಗಡ್ಡಿ, ಶರಣು ಪಾಟೀಲ, ಮಂಜುನಾಥ ಗೊಂಡಬಾಳ, ಮುದಕಪ್ಪ ಹೊಸಮನಿ, ಸೋಮರಡ್ಡಿ ಅಳವಂಡಿ, ರಾಜು ಬಾಕಳೆ, ಡಾ. ಮಂಜುನಾಥ ಸಜ್ಜನ್, ಎಸ್.ಎ.ಗಫಾರ್, ಗವಿಸಿದ್ದಪ್ಪ ಹಲಗಿ, ಹನುಮಂತಪ್ಪ ಗೊಂದಿ, ಮಲ್ಲಪ್ಪ ಬಂಡಿ, ಶಾಂತಪ್ಪ ಅಂಗಡಿ ಇತರರು ಉಪಸ್ಥಿತರಿದ್ದರು.