ಮೈಸೂರು | ಹಿರಿಯ ರೈತರಿಗೆ ಪಿಂಚಣಿ, ಸರ್ಕಾರಿ ಶಾಲಾ ಮಕ್ಕಳಿಗೆ ಕೃಪಾಂಕ ನೀಡಿ: ಶಾಸಕ ಬಿ ಆರ್ ಪಾಟೀಲ್

Date:

Advertisements

ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಕೊಡುವ ಕ್ಷೇತ್ರ ಕೃಷಿ ಮಾತ್ರ. ಕೃಷಿಯಲ್ಲಿ ಎಲ್ಲರೂ ಉತ್ತಮ ಜೀವನ ಕಂಡುಕೊಂಡಿದ್ದಾರೆ ಅನ್ನುವುದು ಸೂಕ್ತವಲ್ಲ. ನಾನು ಕೂಡ ಕೃಷಿಕ ಕುಟುಂಬದವನೆ ನನಗೂ ಕೂಡ ಅದರ ಅರಿವಿದೆ. ರೈತ ಸಾಲದಲ್ಲಿ ಮುಳುಗಿದ್ದಾನೆಯೇ ಹೊರತು ನೆಮ್ಮದಿಯ ಬದುಕು ಕಂಡಿಲ್ಲ. ಹಾಗಾಗಿ ವೃದ್ಧಾಪ್ಯದಲ್ಲಿ ವೃದ್ಧ ರೈತನ ನೆರವಿಗೆ ಪಿಂಚಣಿ ಕೊಡುವ ವ್ಯವಸ್ಥೆಯಾಗಬೇಕು. ಇದಕ್ಕಾಗಿ ಸರ್ಕಾರದ ಮೇಲೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಡ ಹಾಕಬೇಕು ಎಂದು ಶಾಸಕ ಬಿ ಆರ್ ಪಾಟೀಲ್ ಸಲಹೆ ನೀಡಿದರು.

ಮೈಸೂರಿನ ಕೃಷಿ ಉತ್ಪನ್ನ ಅಧ್ಯಯನ ಸಂಸ್ಥೆಯಲ್ಲಿ ಈ ದಿನ.ಕಾಮ್ ಸಹಯೋಗದೊಂದಿಗೆ ನಡೆದ ‘ಹುತಾತ್ಮ ಎಂ ರಾಮು ಮತ್ತು ಜಿ.ಟಿ ರಾಮಸ್ವಾಮಿ ಸ್ಮರಣೆ’ ಹಾಗೂ ಪಡಿತರ ವ್ಯವಸ್ಥೆಗೆ ರೈತರಿಂದಲೇ ಕೊಳ್ಳಬಹುದಾದ ಬೆಳೆಗಳ ಕುರಿತಾಗಿ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ನಾನೂ ಕೂಡ ವಿದ್ಯಾರ್ಥಿ ದೆಸೆಯಲ್ಲಿಯೇ ಚಳುವಳಿಗೆ ಧುಮುಕಿದವನು. ನನಗೆ ಪ್ರೊ. ನಂಜುಂಡಸ್ವಾಮಿ ಅವರ ಪ್ರೇರಣೆ ಇದೆ. ಹಾಗಾಗಿಯೇ ರೈತ ಹೋರಾಟಕ್ಕೆ ಬಂದು ಸಾಕಷ್ಟು ಹೋರಾಟದಲ್ಲಿ ತೊಡಗಿಸಿಕೊಂಡವನು” ಎಂದರು.

Advertisements

“ಹಳ್ಳಿಗಾಡಿನ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಸಿಗುತ್ತಿಲ್ಲ ಹಾಗೂ ಹೀಗೂ ವಿದ್ಯಾಭ್ಯಾಸ ಪೂರೈಸಿ ಪಟ್ಟಣಕ್ಕೆ ಬಂದರೆ ಆಂಗ್ಲ ಮಾಧ್ಯಮದಲ್ಲಿ ಓದಿದ ಮಕ್ಕಳ ಜೊತೆ ಪೈಪೋಟಿ ನಡೆಸಲು ಆಗುವುದಿಲ್ಲ. ಹಾಗಾಗಿ ಮಕ್ಕಳು ಎಲ್ಲ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದಂತಹ ಗ್ರಾಮೀಣ ಮಕ್ಕಳಿಗೆ ಕೃಪಾಂಕ ನೀಡುವ ವ್ಯವಸ್ಥೆ ಮರು ಜಾರಿಯಾಗಬೇಕು” ಎಂದು ಆಗ್ರಹಿಸಿದರು.

ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ನಾವು ಒಂದು ಹಂತದ ಹಳೆ ತಲೆಮಾರುಗಳು. ನಮಗೂ ವಯಸ್ಸಾಗಿದೆ. ಆದರೂ ರಾಜ್ಯಾದ್ಯಂತ ಹೋರಾಟ, ಚಳವಳಿ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದೇವೆ. ಈಗಿನ ಯುವ ಪೀಳಿಗೆ ರೈತ ಚೇತನ ಪುಟ್ಟಣ್ಣಯ್ಯ ಅವರ ಕನಸಿನಂತೆ ಯುವ ಘಟಕ ಸ್ಥಾಪಿತವಾಗಬೇಕು. ಯುವಕರು ಜಾಗೃತರಾಗಿ ಶಿಸ್ತು, ಶಾಂತಿ, ಸಂಯಮದಿಂದ ಸಂಘಟನೆ ಕಟ್ಟಬೇಕು” ಎಂದು ಹೇಳಿದರು.

“ಜವಾಬ್ದಾರಿ ಹೊತ್ತು ಶಕ್ತಿಯುತವಾದ ಯುವ ಘಟಕದ ಮೂಲಕ ಹೋರಾಟದ ರೂಪುರೇಷೆ ಕೈಗೊಳ್ಳಬೇಕು. ಆಗ ಕರ್ನಾಟಕ ರಾಜ್ಯ ರೈತ ಸಂಘ ಇನ್ನಷ್ಟು ಬಲಗೊಳ್ಳುತ್ತದೆ. ಯುವಕರು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಸಂಘಟನೆಯ ಸಿದ್ದಾಂತ ಮೈಗೂಡಿಸಿಕೊಂಡು ಶಿಸ್ತನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಒಬ್ಬ ಚಳವಳಿಗಾರನಾಗಲೂ ಸಾಧ್ಯ” ಎಂದು ಕಿವಿಮಾತು ಹೇಳಿದರು.

ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, “2021 ಜುಲೈನಲ್ಲಿ ನಡೆದ ನರಗುಂದ, ನವಲಗುಂದ ರೈತ ಹುತಾತ್ಮ ದಿನದಂದು ರಾಮು ಹಾಗೂ ರಾಮಸ್ವಾಮಿ ಭಾಗಿಯಾಗಿ ಒಟ್ಟಿಗೆ ಉಪಹಾರ ಸೇವಿಸಿ ತೆರಳಿದ್ದರು. 2021ರ ಜುಲೈ 22ರಂದು ದುರದೃಷ್ಟವಶಾತ್ ಅಪಘಾತಕ್ಕೆ ಈಡಾಗಿ ಇಹಲೋಕ ತ್ಯಜಿಸಿದ್ದಾರೆ. ಸಂಘಟನೆ ಕೆಲಸಕ್ಕಾಗಿ ಪ್ರಾಣ ತೆತ್ತ ಇಂತಹ ಹುತಾತ್ಮರನ್ನು ಸ್ಮರಿಸಬೇಕು. ಇವರೆಲ್ಲರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಹಾಸನ | ಮನೆಯಂಗಳದಲ್ಲೇ ಅಂತ್ಯಸಂಸ್ಕಾರಕ್ಕೆ ಮುಂದಾದ ಪ್ರಕರಣ; ಸೂರನ್ನೂ ಕಳೆದುಕೊಳ್ಳುವ ಭೀತಿ

ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರಮ್ಯ ರಾಮಣ್ಣ, ಯುವ ಘಟಕ ಅಧ್ಯಕ್ಷ ಆದಿತ್ಯ ನಾರಾಯಣ ಕೊಲ್ಲಾಜೇ, ಯುವ ಮುಖಂಡರುಗಳಾದ ಪ್ರಸನ್ನ ಎನ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಪಿ ಮರಂಕಯ್ಯ, ಮಂಡಕಳ್ಳಿ ಮಹೇಶ್, ವಿಜಯೇಂದ್ರ, ಅನಂದೂರು ಪ್ರಭಾಕರ್, ಚಂದ್ರಶೇಖರ್, ರಾಘವೇಂದ್ರ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X