ಬೀದರ್‌ | ಯೋಗದಿಂದ ಆರೋಗ್ಯ ವೃದ್ಧಿ : ಶಾಸಕ ಪ್ರಭು ಚವ್ಹಾಣ

Date:

Advertisements

ಸರ್ವ ರೋಗಗಳಿಗೂ ಯೋಗದಲ್ಲಿ ಪರಿಹಾರವಿದ್ದು, ಎಲ್ಲರೂ ಪ್ರತಿದಿನ ತಪ್ಪದೇ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿ ಪ್ರತಿದಿನ ಕನಿಷ್ಠ ಅರ್ಧ ಗಂಟೆ ಯೋಗಾಭ್ಯಾಸ ಮಾಡಿಸಬೇಕೆಂದು ಮಾಜಿ ಸಚಿವ, ಶಾಸಕ ಪ್ರಭು ಬಿ.ಚವ್ಹಾಣ ಹೇಳಿದರು.

ಭಾರತೀಯ ಜನತಾ ಪಾರ್ಟಿ ಔರಾದ(ಬಿ) ಮಂಡಲ ವತಿಯಿಂದ ಜೂನ್ 21ರಂದು ಪಟ್ಟಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ʼಯೋಗ ಕೇವಲ ಶರೀರಕ್ಕೆ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಸಹಕಾರಿ. ಯೋಗದಿಂದ ಮಾನಸಿಕ ಚಂಚಲತೆ ದೂರವಾಗುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಅದೆಷ್ಟೋ ಕಾಯಿಲೆಗಳು ಯೋಗದಿಂದ ವಾಸಿಯಾಗಿರುವ ಉದಾಹರಣೆಗಳಿವೆ. ಹಾಗಾಗಿ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಮಕ್ಕಳಿಗೆ ಯೋಗದ ಮಹತ್ವ ತಿಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆʼ ಎಂದು ಹೇಳಿದರು.

Advertisements

ʼಭಾರತೀಯ ಪರಂಪರೆಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಹಾಗಾಗಿಯೇ ಹಿರಿಯರು ನೂರು ವರ್ಷ ಬಾಳುತ್ತಿದ್ದರು. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್, ಟಿವಿಗಳಲ್ಲಿ ಕಾಲಹರಣ ಮಾಡುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾರಣ ಸಾಕಷ್ಟು ರೋಗಗಳು ಬಾಧಿಸುತ್ತಿವೆ. ಯುವಜನತೆ ಈ ಕುರಿತು ಎಚ್ಚರ ವಹಿಸಬೇಕುʼ ಎಂದರು.

ʼಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯ ಸರಿಯಿದ್ದರೆ ಏನಾದರೂ ಸಾಧಿಸಬಹುದು. ಹಾಗಾಗಿ ಜೀವನಕ್ಕೆ ಯೋಗ ಅತ್ಯಂತ ಅವಶ್ಯಕ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳಬೇಕು. ಯೋಗಾಭ್ಯಾಸ ಮಾಡಬೇಕು. ಯಾವುದೇ ದುಷ್ಚಟಗಳಿಗೆ ಬಲಿಯಾಗಬಾರದುʼ ಎಂದು ಶಾಸಕರು ಕಿವಿಮಾತು ಹೇಳಿದರು.

WhatsApp Image 2025 06 21 at 5.09.12 PM
ಶಾಸಕ ಪ್ರಭು ಚವ್ಹಾಣ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಯೋಗ ತರಬೇತಿ ನೀಡಿದ ಯೋಗಗುರು ಹಾವಗಿರಾವ ವಟಗೆ ಮಾತನಾಡಿ, ʼಜಗತ್ತಿನಲ್ಲಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ತಮ್ಮಲ್ಲಿರುವ ವಾಹನಗಳನ್ನು ಸ್ವಚ್ಛವಾಗಿಡುವುದು, ಸರ್ವಿಸಿಂಗ್ ಕೊಡುವುದು ಮಾಡಲಾಗುತ್ತದೆ. ಆದರೆ ಅತ್ಯಂತ ಮಹತ್ವವಾಗಿರುವ ಆರೋಗ್ಯಕ್ಕೆ ಕಾಳಜಿ ವಹಿಸದಿರುವುದು ದುರದೃಷ್ಟಕರ. ಪ್ರತಿದಿನ ಯೋಗಾಭ್ಯಾಸ ಮಾಡಿದರೆ ಯಾವುದೇ ರೋಗಗಳು ಬಳಿಗೆ ಸುಳಿಯುವುದಿಲ್ಲವೆಂದು ತಿಳಿಸಿದರು.

ಯೋಗಗುರು ಧನರಾಜ ವಲ್ಲೆಪೂರೆ, ಶಿವರಾಜ ಶೆಟಕಾರ, ಶಿವರಾಜ ಶಿವರಾಜ ಝುಲಂಡೆ ಅವರು ಯೋಗ ತರಬೇತಿ ನೀಡಿದರು.

ಯೋಗ ದಿನಾಚರಣೆಯ ಸಂಚಾಲಕರಾದ ಶಿವರಾಜ ಅಲ್ಮಾಜೆ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ದಯಾನಂದ ಘೂಳೆ, ಡಾ.ವೈಜಿನಾಥ ಬುಟ್ಟೆ, ಸಚಿನ ರಾಠೋಡ, ಕೇರಬಾ ಪವಾರ, ಖಂಡೋಬಾ ಕಂಗಟೆ, ಪ್ರವೀಣ ಕಾರಬಾರಿ, ಮಹಾದೇವ ಅಲ್ಮಾಜೆ, ಸಂಜು ವಡೆಯರ್, ಯಾದು ಮೇತ್ರೆ, ಬಸವರಾಜ ಹಳ್ಳೆ, ಗುಂಡಪ್ಪ ಮುಧಾಳೆ, ಭರತ ಕದಂ, ಶ್ರೀನಿವಾಸ ಖೂಬಾ, ಸಿದ್ರಾಮಪ್ಪ ನಿಡೋದೆ, ಉದಯ ಸೋಲಾಪೂರೆ, ಇನಿಲ್ ಹೊಳಸಮುದ್ರೆ, ಹಣಮಂತ ನೇಳಗೆ, ಪ್ರದೀಪ ಪವಾರ, ಧನಾಜಿ ರಾಠೋಡ, ಅನೀಲ ಬಿರಾದಾರ, ಗೋವಿಂದ ಪಾಟೀಲ, ನಾಗನಾಥ ಮೋರ್ಗೆ, ಸಂಜು ಮುರ್ಕೆ, ರವೀಂದ್ರ ರೆಡ್ಡಿ, ಪ್ರಕಾಶ ಮೇತ್ರೆ, ಯೋಗೇಶ ಸುರನಾರ, ಸೀತಾರಾಮ ಕೋರೆಕಲ್, ಮಹೇಶ ಭಾಲ್ಕೆ, ಶೇಷಿರಾವ ರಾಠೋಡ, ಬಾಲಾಜಿ ಕಾಸ್ಲೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೀದರ್‌ | ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ : ಸೋಮನಾಥ ಪಾಟೀಲ

ಒತ್ತಡದ ಜೀವನದಲ್ಲಿ ಮನಷ್ಯನು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗವು ಅತ್ಯಂತ ಅವಶ್ಯಕವಾಗಿದ್ದು ಈ ನಿಟ್ಟಿಬಲ್ಲಿ ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾದ್ಯಕ್ಷ ಸೋಮನಾಥ ಪಾಟೀಲ ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಕ್ಷ ಬೀದರ ನಗರ ಮಂಡಲ ವತಿಯಿಂದ ನಗರದ ವಿಜ್ಞಾನ ವರ್ಧಿನಿ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚಾರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

WhatsApp Image 2025 06 21 at 5.09.38 PM

ʼವೇದ ಉಪನೀಷತ್ತಿನಲ್ಲು ಯೋಗದ ಉಲ್ಲೇಖವಿದೆ ಮತ್ತು ಶತಮಾನಗಳಿಂದ ನಮ್ಮ ಸಾಧು ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗಗುರು ಬಾಬಾ ರಾಮದೇವ, ರವಿಶಂಕರ ಗೂರುಜಿ ಸೇರಿದಂತೆ ಅನೇಕ ಸಂತರು ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದ್ದು ಜಗತ್ತಿನಾದ್ಯಂತ ಯೋಗ ದಿನ ಆಚರಿಸುತ್ತಿರುವುದು ಭಾರತೀಯರೆಲ್ಲರಿಗೆ ಹೆಮ್ಮೆಯ ವಿಷಯʼ ಎಂದು ಹೇಳಿದರು.

ಐ.ಎನ್.ಓ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಹಾಗೂ ಉಪಾದ್ಯಕ್ಷ ನಿಲಮ್ಮಾ ರೂಗನ್ ಯೋಗಾಭ್ಯಾಸ ನಡೆಸಿಕೊಟ್ಟರು.

ಇದನ್ನೂ ಓದಿ : ಬೀದರ್‌ ಕೋಟೆಯಲ್ಲಿ ವಿಶ್ವ ಯೋಗ ದಿನಾಚರಣೆ ; ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಗಿ

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪಾ ಔರಾದೆ, ನಗರ
ಅಧ್ಯಕ್ಷ ಶಶಿಧರ ಹೋಸಳ್ಳಿ, ಯೋಗ ದಿನಾಚರಣೆ ಅಭಿಯಾನದ ಜಿಲ್ಲಾ ಸಂಯೋಜಕ ಗುರುನಾಥ ರಾಜಗೀರಾ, ಪ್ರಮುಖರಾದ ಬಾಬು ವಾಲಿ, ಜಯಕುಮಾರ ಕಾಂಗೆ, ರಾಜಶೇಖರ ನಾಗಮೂರ್ತಿ, ಗಣೇಶ ಭೋಸ್ಲೆ, ಸುನೀಲ ಗೌಳಿ ಸೇರಿದಂತೆ ಇತರರಿದ್ದರು ಎಂದು ಬಿಜೆಪಿ ಜಿಲ್ಲಾ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X