ಬಾಲ್ಯ ವಿವಾಹಗಳ ತಡೆಗಟ್ಟಲು ಬಲಿಷ್ಠ ಕಾನೂನುಗಳು ಜಾರಿಗೆ ಬಂದರೂ ಜನರಿಗೆ ಇನ್ನೂ ಅದರ ಅರಿವು ಹಾಗೂ ಜಾಗೃತವಾಗಿಲ್ಲ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಸಿರಗುಪ್ಪ ತಾಲೂಕಿನ ಮೋಕಾ ಠಾಣೆಯ ವಲಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಕ್ಕಬೇವಿನ ಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯ ವಿವಾಹ ನಡೆದ ಬಗ್ಗೆ ಬಳ್ಳಾರಿ ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಾಲ್ಯ ವಿವಾಹ ನಿಷೇಧ ಅಧಿಕಾರಿ, ವಲಯ ಮೇಲ್ವಿಚಾರಕ ಎಸ್ ಆರ್ ನಾಗುಬಾಬು ಸಲ್ಲಿಸಿದ ದೂರಿನ ಅನ್ವಯ ಮೂವರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ: ಬಳ್ಳಾರಿ | ಜೂ.25ರೊಳಗೆ ತುಂಗಭದ್ರಾ ಜಲಾಶಯದ ಮೂರೂ ಕಾಲುವೆಗಳಿಗೆ ನೀರು ಬಿಡಿ: ಕರೂರ್ ಮಾಧವ ರೆಡ್ಡಿ