ಬೀದರ್‌ | ದೈಹಿಕ ಆರೋಗ್ಯಕ್ಕೆ ಯೋಗ ಪೂರಕ : ರೇಷ್ಮಾ ಕೌರ್

Date:

Advertisements

ಬೀದರ್ ನಗರದ ಗುರುನಾನಕ್ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾಮೂಹಿಕ ಯೋಗಾಭ್ಯಾಸ ನಡೆಯಿತು.

ಭಾರತ ಸರ್ಕಾರ ಆಯುಶ್ ಇಲಾಖೆಯ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಗುರುನಾನಕ ಶಿಕ್ಷಣ ಸಂಸ್ಥೆ, ಇಂಟರ್ನ್ಯಾಶನಲ್ ನ್ಯಾಚುರೋಪತಿ ಆರ್ಗನೈಜೇಶನ್, ಸೂರ್ಯ ಫೌಂಡೇಶನ್ ಹಾಗೂ ಪತಂಜಲಿ ಸಂಸ್ಥೆಯ ಆಯೋಜಕತ್ವದಲ್ಲಿ ನಡೆದ ಯೋಗ ದಿನಾಚಾರಣೆ ಕಾರ್ಯಕ್ರಮಕ್ಕೆ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ.ಎಸ್.ಬಲಬೀರ ಸಿಂಗ್ ಅವರು ಚಾಲನೆ ನೀಡಿದರು.

ಸಂಸ್ಥೆಯ ಮುಖ್ಯಸ್ಥರಾದ ರೇಷ್ಮಾ ಕೌರ್ ಮಾತನಾಡಿ, ʼಯೋಗ ಭಾರತದ ಪರಂಪರೆಯ ಕೊಡುಗೆಯಾಗಿದೆ, ಯೋಗವು ದೇಹ ಮನಸ್ಸನ್ನು ಒಳಗೊಂಡಿದೆ. ಮನುಷ್ಯ ಹಾಗೂ ಪ್ರಕೃತಿ ಮಧ್ಯದ ಬಾಂಧವ್ಯವೇ ಯೋಗ,ಯೋಗ ಬದುಕು ಬದಲಿಸುವ ಮತ್ತು ಅರಳಿಸುವ ವಿಧಾನವಾಗಿದೆ, ಜೊತೆಗೆ ಯೋಗ ಸಂಯಮ, ಸಾರ್ಥಕತೆಯನ್ನು ಒಳಗೊಂಡಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನ ಉತ್ತಮವಾಗಿಸುತ್ತದೆʼ ಎಂದರು.

Advertisements

ಸೂರ್ಯ ಫೌಂಡೇಶನ್ ಹಾಗೂ ಐಎನ್‌ಒ ರಾಜ್ಯ ಸಂಯೊಜಕ ಗುರುನಾಥ ರಾಜಗೀರಾ ಮಾತನಾಡಿ, ʼಯೋಗಕ್ಕೆ
ಸಾವಿರಾರು ವರ್ಷಗಳ ಇತಿಹಾಸವಿದ್ದು, ಭಾರತದ ಕರೆಗೆ ಓಗೊಟ್ಟು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸೂರ್ಯ ಫೌಂಡೇಶನ್ ಹಾಗೂ ಐಎನ್‌ಒ ವತಿಯಿಂದ ದೇಶಾದ್ಯಂತ ಎಂಟು ಸಾವಿರ ಕಡೆ ಮತ್ತು ಬೀದರ ಜಿಲ್ಲೆಯಲ್ಲಿ ಇಪ್ಪತ್ತೊಂದು ಕಡೆ ಯೋಗ ದಿನಾಚರಣೆ ಯಶಸ್ವಿಯಾಗಿ ನಡೆಸಲಾಗಿದೆʼ ಎಂದರು.

WhatsApp Image 2025 06 21 at 5.46.05 PM
ಯೋಗ ದಿನಾಚರಣೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.

ಯೋಗ ಶಿಕ್ಷಕ ಹಾಗೂ ಐಎನ್‌ಒ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಅವರ ಅತ್ಯುತ್ತಮ ಯೋಗ ತರಬೇತಿ ಹಾಗೂ ಯೋಗಪಟು ಆನಂದ ಅವರ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು, ಬಳಿಕ ಇವರ ಸೇವೆಯನ್ನು ಮನಗಂಡು ಗುರುನಾನಕ್ ಶಿಕ್ಷಣ ಸಂಸ್ಥೆಯವರು ವಿಶೇಷ ಸನ್ಮಾನ ಮಾಡಿ ಪ್ರೋತ್ಸಾಹಿಸಿದರು.

ಇದನ್ನೂ ಓದಿ : ಬೀದರ್‌ | ಯೋಗದಿಂದ ಆರೋಗ್ಯ ವೃದ್ಧಿ : ಶಾಸಕ ಪ್ರಭು ಚವ್ಹಾಣ

ಪ್ರಮುಖರಾದ ಗುರು ನಾನಕ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಮೇಶ್ವರರಾವ್, ಮಾಜಿ ಕರ್ನಲ್ ಆರ್.ಡಿ.ಸಿಂಗ್, ಆನಂದ ರೆಡ್ಡಿ, ಶಿವಕುಮಾರ ಸ್ವಾಮಿ, ಸಚಿನ ಸೋಲಪುರೆ, ಯೊಗೆಂದ್ರ ಯದಲಾಪುರೆ, ಶಿವಮೂರ್ತಿ ಬಟನಾಪುರೆ ಸೇರಿದಂತೆ ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X