ವಿದ್ಯುತ್ ಕಂಬಗಳು ಹಾಗೂ ನಗರದಲ್ಲಿ ದಿನನಿತ್ಯ ಆಗುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ನಿಷ್ಕಾಳಜಿತನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಜಿಲ್ಲಾ ಸಮಿತಿ ಯಾದಗಿರಿ ವತಿಯಿಂದ ಜೆಸ್ಕಾಂ ಮುಖ್ಯ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಕ್ಷ ರಾಹುಲ್ ಕೊಲ್ಲೂರಕರ್ ಮಾತನಾಡಿ, ʼಯಾದಗಿರಿ ನಗರದ ಕೋಟೆಗಾರವಾಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದುಗಡೆ ವಿದ್ಯುತ್ ಕಂಬ ಮತ್ತು ವೈರ್ ಜೋತು ಬಿದ್ದಿದ್ದು, ಇದರಿಂದ ಶಾಲಾ ಮಕ್ಕಳಿಗೆ ಇಲ್ಲಿನ ನಿವಾಸಿಗಳಿಗೆ ಬಹಳ ತೊಂದರೆ ಆಗುತ್ತಿದೆ. ಏನಾದರೂ ಜೀವಕ್ಕೆ ಅಪಾಯವಾದರೆ ಯಾರೂ ಹೊಣೆ, ಪುಟ್ಟ ಮಕ್ಕಳು ಅಪಾಯದೊಂದಿಗೆ ಬದುಕುತ್ತಿದ್ದಾರೆ. ಇಲ್ಲಿನ ಮನೆ ಪಕ್ಕದಲ್ಲಿ ವಿದ್ಯುತ್ ಕಂಬದ ಕಬ್ಬಿಣದ ಸರಳು ಮುರಿದು ಹೋಗಿದ್ದು ನೆಲಕ್ಕುರುಳುವ ಸ್ಥಿತಿಯಲ್ಲಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ನಿಷ್ಕಾಳಜಿತನ ತೋರಿದ್ದು, ಅಧಿಕಾರಿಗಳಾದ ಜೆಇ, ಎಇಇ ಲೈನ್‌ಮ್ಯಾನ್ 2 ಬಾರಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು. ಯಾವುದೇ ಕ್ರಮ ಕೈಗೊಂಡಿಲ್ಲ. ಎಇಇ ಕಛೇರಿಗೆ ಹಲವಾರು ಬಾರಿ ಭೇಟಿ ನೀಡಿದರೂ ಕೂಡಾ ನಿರ್ಲಕ್ಷ್ಯ ತೋರಿ ಕರ್ತವ್ಯ ಲೋಪ ಎಸಗಿದ್ದಾರೆ. ನಮ್ಮ ಯಾವುದೇ ಮನವಿ ಪತ್ರಕ್ಕೆ ಹಿಂಬರಹ ನೀಡಿರುವುದಿಲ್ಲ ಹಾಗೂ ಸದರಿ ಕೋಟೆಗಾರವಾಡಾದಲ್ಲಿ ದಿನಕ್ಕೆ 5-6 ಬಾರಿ ಬೇಕಾಬಿಟ್ಟಿಯಾಗಿ ವಿದ್ಯುತ್ ಲೈನ್ ತೆಗೆಯುತ್ತಾರೆ ಲೈನ್ ಜಂಪ್ ಆಗಿ ಟಿವಿ, ಫ್ರಿಡ್ಜ್ ಗಳು ಹಾಳಾಗಿದ್ದು, ಸಾಕಷ್ಟು ಅನಾಹುತಗಳಿ ಆಗಿವೆ. ಅಧಿಕಾರಿಗಳಿಗೆ ಪೋನ್ ಮಾಡಿದರೆ ಕರೆ ಸ್ವೀಕರಿಸುವುದಿಲ್ಲʼ ಎಂದು ದೂರಿದರು.
ಕೂಢಲೇ ನಿಷ್ಕಾಳಜಿ ತೋರಿದ ಜೆಸ್ಕಾಂ ಎಇಇ, ಜೆಇ, ಎಸ್‌ಓ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಅವರನ್ನು ಅಮಾನತು ಮಾಡಬೇಕು. ಒಂದು ವಾರದಲ್ಲಿ ಸದರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಸಮಸ್ಯೆ ಬಗೆಹರಿಸದೇ ಹೋದಲ್ಲಿ ತಮ್ಮ ಕಛೇರಿಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ಮಾಡಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೀದರ್ | ಸಿದ್ರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಾಗ ಶಾಸಕ ಬಿ.ಆರ್.ಪಾಟೀಲ್ ಸತ್ಯ ಹೇಳ್ತಾರೆ
ಈ ಸಂದರ್ಭದಲ್ಲಿ ಮೋನಪ್ಪ ಮುನೇಪ್ಪಾನೋರ್, ಆಂಜನೇಯ ಭಂಡಾರಿ, ರಮೇಶ್ ಕೌಳೂರ್, ಹಸೇನ್ ನಾಧಫ್, ರಾಮು ಗಣಪುರ, ಹಣಮಂತ ಕೊಲ್ಲೂರ್ ಇದ್ದರು.