ಚೆಕ್‌ಡ್ಯಾಂನಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಕಾರಿಗನೂರಿನಲ್ಲಿ ಶನಿವಾರ ಸಂಜೆ ನಡೆದಿದೆ.
ಹನುಮಂತ (14) ಮತ್ತು ಅರವಿಂದ (14) ಮೃತ ಬಾಲಕರು. ಇವರಿಬ್ಬರೂ ಕಾರಿಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.
ಗಣಿಬಾಧಿತ ಆರ್‌ಬಿಎಸ್ ಎಸ್‌ಎನ್ ಕ್ಯಾಂಪ್‌ನ ನಿವಾಸಿಗಳಾದ ಈ ಇಬ್ಬರು ಮಕ್ಕಳ ಪಾಲಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಕಾರಿಗನೂರು ಹೊರವಲಯದ ಗುಡ್ಡದ ತಿಮ್ಮಪ್ಪನ ದೇಗುಲ ಬಳಿಯ ಚೆಕ್‌ಡ್ಯಾಂನಲ್ಲಿ 10 ರಿಂದ 15 ಅಡಿಯಷ್ಟು ಆಳದ ನೀರಲ್ಲಿ ಈ ಘಟನೆ ನಡೆದಿದೆ.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಸಿದ್ರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಾಗ ಶಾಸಕ ಬಿ.ಆರ್.ಪಾಟೀಲ್ ಸತ್ಯ ಹೇಳ್ತಾರೆ