ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಸಿಐಟಿಯು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕೆ.ಮಹಾಂತೇಶ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ಎಸ್.ಎಂ.ಶಫಿಸಾಬ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ ಕಾರ್ಮಿಕ ಸಂಘದ ಚುನಾವಣೆಯು ಮುಖ್ಯವಾಗಿ ಕಂಪನಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಟಿಯುಸಿಐ ಅಮೀರ ಅಲಿ, ಆಕಳ ಪಕ್ಷದಿಂದ ವಾಲಿಬಾಬು, ಎಐಟಿಯುಸಿ ವಿಜಯ ಭಾಸ್ಕರ್ ಹಾಗೂ ಸಿಐಟಿಯು ಎಸ್.ಎಂ.ಶಫಿ ಇವರುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಚುನಾವಣೆಯಲ್ಲಿ ವಾಲಿಬಾಬು 950 ಮತ, ಎಸ್.ಎಂ.ಶಫಿ 1,014 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿಗಳಾಗಿದ್ದ ವಿಜಯ ಭಾಸ್ಕರ್ 616 ಮತ, ಅಮೀರ್ ಅಲಿ 644 ಮತ ಪಡೆದು ಸೋಲು ಕಂಡರು.
ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಎಐಟಿಯುಸಿ ಪಕ್ಷ 925 ಮತಗಳು, ಸಿಐಟಿಯು ಪಕ್ಷ 944 ಮತಗಳು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸ್ಪರ್ಧಿಸಿದ್ದ ಆಕಳು ಪಕ್ಷ 826, ಟಿಯುಸಿಐ 523 ಹಾಗೂ ವಜ್ರ ಪಕ್ಷ 32 ಮತಗಳು ಪಡೆದು ಪರಾಭವಗೊಂಡರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೆರೆಯಲ್ಲಿ ಮುಳುಗಿ ಕುರಿಗಾಹಿ ಸಾವು
ಮೊದಲನೇ ಸುತ್ತಿನ ಎಣಿಕೆ ಮುಗಿದಿದ್ದು, ಇನ್ನೂ ಕೆಲವು ಸ್ಥಾನಗಳ ಮತ ಎಣಿಕೆ ಕಾರ್ಯ ನಡೆದಿದೆ.
