ಹಂದಿ ಅಡ್ಡ ಬಂದ ಪರಿಣಾಮ ಆಟೊ ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಮೂವರು ಗಾಯಗೊಂಡಿರುವ ಘಟನೆ ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಬಳಿ ನಡೆದಿದೆ.
ಮನೆ ಉದ್ಘಾಟನೆ ಹಿನ್ನೆಲೆಯಲ್ಲಿ ಭಜನೆಗಾಗಿ ಯಾದಗಿರಿ ನಗರಕ್ಕೆ ಬಂದಿದ್ದ ಭಜನಾ ತಂಡವೊಂದು, ಕಾರ್ಯಕ್ರಮ ಮುಗಿಸಿ ತಮ್ಮ ಊರಿಗೆ ವಾಪಸ್ ತೆರಳುವಾಗ ಈ ದುರ್ಘಟನೆ ಜರುಗಿದೆ. ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಜನೆ ತಂಡದವರು ಊರಿಗೆ ಮರಳುತ್ತಿದ್ದಾಗ ಬಂದಳ್ಳಿ ಗ್ರಾಮದ ಸಮೀಪ ರಸ್ತೆಗೆ ಹಂದಿಯೊಂದು ಏಕಾಏಕಿ ಅಡ್ಡಬಂದಿದೆ. ಅದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ, ಆಟೊ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮೃತ ಹಾಗೂ ಗಾಯಗೊಂಡವರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಲಬುರಗಿ | ನಿವೃತ್ತ ನರ್ಸ್ ಎಡವಟ್ಟಿನಿಂದ ಬಾಣಂತಿ, ಮಗು ಸಾವು : ಆರೋಪ