ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಟ್ರಸ್ಟಿಗಳ ಅವ್ಯವಹಾರದ ವಿರುದ್ಧ ಎಂಟು ದಿನಗಳ ಹೋರಾಟ ನೆಡೆಸಿ, ತನಿಖೆಯ ಭರವಸೆ ನಂತರ ಮುಂದೂಡಿದ್ದ ಆಶ್ರಮ ರಕ್ಷಣಾ ಸಮಿತಿಯು ಮತ್ತೆ ಹೋರಾಟ ಪ್ರಾರಂಭಿಸಿದ್ದು, ಕೆಲವರು ಅಕ್ರಮವಾಗಿ ಟ್ರಸ್ಟಿಗಳಾಗಿ ಸೇರಿಕೊಂಡಿದ್ದಾರೆ. ಅವರು ಟ್ರಸ್ಟ್‌ನ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಆಕ್ಷೇಪ ವ್ಯಕ್ತಪಡಿಸಿ ಆಶ್ರಮ ರಕ್ಷಣಾ ಸಮಿತಿಯ ಸದಸ್ಯರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಆಶ್ರಮದ ಹೊರಗೆ ಪ್ರತಿಭಟನೆ ನಡೆಸಿದರು.

ಟ್ರಸ್ಟ್‌ನ ನೂತನ ಅಧ್ಯಕ್ಷ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು “ಆಶ್ರಮಕ್ಕೆ ಅಕ್ರಮವಾಗಿ ಟ್ರಸ್ಟಿಗಳನ್ನು ನೇಮಕ ಮಾಡಲಾಗಿದೆ. ಟ್ರಸ್ಟಿನ ಸದಸ್ಯರು ಹಣಕಾಸು ಅವ್ಯವಹಾರಗಳು ನಡೆಸಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆಶ್ರಮ ಉಳಿಸಲು ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸೇರಿ ಹೋರಾಟ ಮಾಡಿದ್ದೇವೆ. ಸರ್ಕಾರ ಏಪ್ರಿಲ್ ತಿಂಗಳಲ್ಲಿ ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ರು. ಮೂರು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ತನಿಖೆ ಮುಗಿದು ಆದೇಶ ಬರುವವರೆಗೆ ಆಶ್ರಮದ ಒಳಗೆ ಟ್ರಸ್ಟಿಗಳನ್ನು ಬಿಡಬಾರದು’ ಎಂದು ಮನವಿ ಮಾಡಿದರು.

‘ನಮಗೆ ಮಾದಾರ ಚನ್ನಯ್ಯ ಶ್ರೀಗಳ ಮೇಲೆ ಭಕ್ತಿ ಇದೆ. ಆದರೆ, ಇಲ್ಲಿನ ಟ್ರಸ್ಟಿಗಳು ತಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಿಕೊಳ್ಳಲು ವಿವಿಧ ರೀತಿಯ ಷಡ್ಯಂತ್ರ ರೂಪಿಸುತ್ತಿದ್ದಾರೆ’ ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಳೆ ಬಂದರೆ ಸೋರುವ ಬೀಳುವ ಹೆಂಚು ಪ್ರಾಣಿಗಳ ವಾಸಸ್ಥಾನವಾದ ಅಮರಾವತಿ ಶಾಲೆ; ಶಿಕ್ಷಣಾಸಕ್ತರ ಆರೋಪ
‘ತನಿಖೆಗೆ ನನ್ನ ಸಂಪೂರ್ಣ ಸಹಮತ ಇದೆ. ಜಿಲ್ಲಾಧಿಕಾರಿ ನೇತೃತ್ವದ ತಂಡ ಪರಿಶೀಲನೆ ನಡೆಸಿ ವರದಿ ಕೊಡಲಿ. ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಗೊಂದಲಗಳಿದ್ದರೆ ಕೂತು ಬಗೆಹರಿಸಿಕೊಳ್ಳೋಣ. ಆಶ್ರಮದ ಆಡಳಿತ ಸ್ವಚ್ಛವಾಗಿರಬೇಕು. ಅದಕ್ಕೆ ಸ್ವಾಮೀಜಿ ಸಹಕಾರ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಸಂತೋಷ್, ವಿನೋದ್. ಉಮೇಶ್, ದುಮ್ಮಿ ಬಸವರಾಜಪ್ಪ, ಎ.ಚಿತ್ತಪ್ಪ ಸೇರಿದಂತೆ ಇತರರು ಹಾಜರಿದ್ದರು.