ಬೆಳಗಾವಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ನಡೆದ ಪದ್ಮಾವತಿ ಅಂಗಡಿ ಅವರ 64ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಮಹಿಳಾ ರತ್ನ’ ಹಾಗೂ ‘ಆದರ್ಶ ದಂಪತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದ ಗದುಗಿನ ತೋಂಟದಾರ್ಯ ಸಂಸ್ಥಾನಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಕರ್ನಾಟಕದ ಸಾಂಸ್ಕೃತಿಕ ಗುರುಬಲ ಬಸವಣ್ಣನವರ ತತ್ವಾಧಾರಿತ ಜೀವನ ಮೌಲ್ಯಗಳನ್ನು ನಾಡಿನ ಜನತೆಗೆ ಪ್ರಚಾರ ಮಾಡುವ ಉದ್ದೇಶದಿಂದ ಈ ವರ್ಷದ ಸೆಪ್ಟೆಂಬರ್ 1ರಿಂದ ರಾಜ್ಯದಾದ್ಯಂತ ‘ಬಸವ ಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆಎಂದು ತಿಳಿಸಿದರು .
ಸ್ವಾಮೀಜಿ ಆಶೀರ್ವಚನ ನೀಡಿ, “ದಾಂಪತ್ಯ ಜೀವನ ಕೇವಲ ಗಂಡು-ಹೆಣ್ಣು ಒಟ್ಟಿಗೆ ಇರುವ ಸಂಬಂಧವಲ್ಲ. ಪರಸ್ಪರ ಸಹಕಾರ, ಬದ್ಧತೆ ಮತ್ತು ಶ್ರದ್ಧೆಯೊಂದಿಗೆ ಕೂಡಿದ ಜೀವನವಿದು. ಜೀವನದಲ್ಲಿ ಕಷ್ಟಗಳು ಬಂದಾಗ ದಂಪತಿಗಳು ಧೈರ್ಯ ಕಳೆದುಕೊಳ್ಳದೆ, ಸಮಾಲೋಚನೆಯ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಹಾಗಾದಾಗಲೇ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿದ ಕುಟುಂಬ ಜೀವನ ಸಾಧ್ಯ,” ಎಂದು ಸಲಹೆ ನೀಡಿದರು.
ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಲು ಜನಸಾಮಾನ್ಯರು, ಯುವಪೀಳಿಗೆ ಮತ್ತು ಸಮಾಜದ ಎಲ್ಲ ವರ್ಗಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.