ರಾಜ್ಯ ಸರ್ಕಾರದ ಕಾರ್ಯವೈಖರಿಯ ವಿರುದ್ಧವೇ ಸ್ವಪಕ್ಷದ ಶಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಕ್ಷೇತ್ರದ ಶಾಸಕರಾದ ರಾಜು ಕಾಗೆ ಅವರು ಸರ್ಕಾರದ ನಿರ್ಲಕ್ಷ್ಯತೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದೇ ಎರಡು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಮನವಿಗಳ ಬಳಿಕವೂ ಅನುದಾನ ನೀಡಲಾಗುತ್ತಿಲ್ಲ. ಅಭಿವೃದ್ಧಿಯ ವಿಷಯದಲ್ಲಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅವರು ಖುದ್ದಾಗಿ ಮಾಧ್ಯಮಗಳ ಮುಂದೆ ಭಾವುಕರಾಗಿ ಹೇಳಿದರು.
“ನಮ್ಮ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಶಾಸಕ ರಾಜು ಕಾಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಲಾಗಿದ್ದ ₹25 ಕೋಟಿಯ ಅನುದಾನಕ್ಕೆ ಮೂರು ವರ್ಷವಾದರೂ ಇನ್ನೂ ವರ್ಕ್ ಆರ್ಡರ್ ಹೊರಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಎರಡು ವರ್ಷ ಕಳೆದರೂ ಕೆಲಸಕ್ಕೆ ಚಾಲನೆ ಇಲ್ಲದಿರುವುದು ಎಂಥಾ ನಿರ್ಲಕ್ಷ್ಯ? ಇದು ನಾನ್ನು ತೀವ್ರವಾಗಿ ನೊಂದಿದೆ. ನನ್ನ ಸಹನುಭೂತಿ ಮೀರಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಅಸಮಾಧಾನ ಮತ್ತಷ್ಟು ತೀವ್ರಗೊಳಿಸಿ ಅವರು, “ನಾನು ರಾಜೀನಾಮೆ ನೀಡುವ ಸ್ಥಿತಿಗೆ ತಲುಪಿದ್ದೇನೆ. ಎರಡು ದಿನಗಳಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ನೀಡಿದರೆ ಯಾರಿಗೂ ಆಶ್ಚರ್ಯವಾಗಬಾರದು” ಹೇಳಿದ್ದಾರೆ
ರಾಜ್ಯ ಸರ್ಕಾರದ ವಿರುದ್ಧ ಈ ರೀತಿಯ ಸ್ವಪಕ್ಷದ ಶಾಸಕರಿಂದಲೇ ಬರುವ ಟೀಕೆ, ಆಡಳಿತದ ಒಳಗಿನ ಅಸಮಾಧಾನಕ್ಕೆ ಬೆಳಕು ಚೆಲ್ಲಿದ್ದು, ಪಕ್ಷದ ಉನ್ನತ ನಾಯಕರಿಗೂ ಆತಂಕದ ವಿಚಾರವಾಗಿದೆ.
ಶಾಸಕ ರಾಜು ಕಾಗೆ ಅವರ ಆರೋಪಗಳು ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.