- ಆಟೋ ರೀಕ್ಷಾಗಳು ಮೀಟರ್ ಲೆಕ್ಕದಲ್ಲಿ ಸಂಚರಿಸುವ ಏಕೈಕ ಸ್ಥಳ ಮುಂಬೈ
- ಮುಂಬೈನಲ್ಲಿ ಸುಮಾರು 9 ಕಿ.ಮೀಗಳಿಗೆ ₹100 ಆಟೋ ಮೀಟರ್ ದರ
ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಆಟೋದಲ್ಲಿ ಪ್ರಯಾಣಿಸುವುದು ಬಲು ದುಬಾರಿಯಾಗಿದ್ದು, ಇಲ್ಲೊಬ್ಬ ವ್ಯಕ್ತಿ 500 ಮೀ ಪ್ರಯಾಣಿಸಿದಕ್ಕಾಗಿ ₹100 ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈ ಮೂಲದ ನ್ಯೂರಲ್‌ಗ್ಯಾರೇಜ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಆದ ಮಂದಾರ ನಾಟೇಕರ್ ಅವರು ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಈ ಫೋಟೋದಲ್ಲಿ ನೀವು ಬೆಂಗಳೂರಿನ ಅತ್ಯಂತ ಆಲಂಕಾರಿಕ ವಸ್ತುವನ್ನು ನೋಡುತ್ತೀರಿ. ಅದುವೇ ದೊಡ್ಡ ಆಟೋ ಮೀಟರ್. ಎಷ್ಟು ದುಬಾರಿ ಎಂದರೆ ಅದು ಎಂದಿಗೂ ಬಳಕೆಯಾಗುವುದಿಲ್ಲ. ನಾನು ಕೇವಲ 500 ಮೀಟರ್ ರೈಡ್‌ಗೆ ₹100 ಪಾವತಿಸಿದ್ದೇನೆ. ಅಂದಾಜಿನ ಪ್ರಕಾರ ಮುಂಬೈನಲ್ಲಿ ಸುಮಾರು 9 ಕಿ.ಮೀಗಳಿಗೆ ₹100 ಮೀಟರ್ ದರವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಫೋಟೋ ಹಾಕಿ ‘ಪೀಕ್ ಬೆಂಗಳೂರು’ ಎಂದು ಹ್ಯಾಶ್‌ಟ್ಯಾಗ್ ನೀಡಿದ್ದಾರೆ.
ಇದಕ್ಕೆ ಹಲವಾರು ಜನ ಪ್ರತ್ರಿಕ್ರಿಯೆ ನೀಡಿದ್ದು, “ಮುಂಬೈನಲ್ಲಿ ಮೀಟರ್ ಮೂಲಕ ಆಟೋ ಸಿಗುತ್ತದೆ. ಆದರೆ ರಸ್ತೆಗಳು ತುಂಬಾ ಕೆಟ್ಟ ಸ್ಥಿತಿಯಲ್ಲಿವೆ ಮತ್ತು ತುಂಬಾ ಟ್ರಾಫಿಕ್ ಇದೆ. ಪ್ರತಿ ರಸ್ತೆಯಲ್ಲೂ ಗುಂಡಿಗಳು. ನೀವು ದೂರದ ಪ್ರಯಾಣ ಮಾಡಿದರೆ, ನಿಮಗೆ ಬೆನ್ನುಮೂಳೆಯ ಸಮಸ್ಯೆಗಳು ಖಂಡಿತವಾಗಿ ಪ್ರಾರಂಭವಾಗುತ್ತವೆ” ಎಂದು ತ್ರುಶಿತ್ ಶಾ ಎಂಬುವವರು ತಿಳಿಸಿದ್ದಾರೆ.
ಟಿವಿಎಫ್‌ನ ಅಧ್ಯಕ್ಷ ವಿಜಯ್ ಕೋಶಿ, ‘‘ಇದು ಪ್ರಾಯೋಗಿಕವಾಗಿ ಮುಂಬೈನ ಹೊರಗಿನ ಪ್ರತಿಯೊಂದು ನಗರಕ್ಕೂ ಒಂದೇ ಆಗಿರುತ್ತದೆ. ಚೆನ್ನೈ ಆಟೋ ಸವಾರಿಗೆ ಕುಖ್ಯಾತಿ ಪಡೆದಿದೆ’’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಟೇಕರ್, “ಕಡಿಮೆ ಹೇಳುವುದು ಹಾಸ್ಯಾಸ್ಪದ, ಈ ಹೆದ್ದಾರಿ ದರೋಡೆ ಅಸಲಿ ಎಂದು ತೋರುತ್ತದೆ. ಆದರೆ, ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ’’ ಎಂದರು.
ಈ ಸುದ್ದಿ ಓದಿದ್ದೀರಾ? ಮೆಟ್ರೋದಲ್ಲಿ ಕುಸಿದು ಬಿದ್ದು ವೃದ್ಧ ಸಾವು; ಬಿಎಂಆರ್‌ಸಿಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
“ಭಾರತದ ಮುಂಬೈನಲ್ಲಿ ಮಾತ್ರ ಆಟೋ ರೀಕ್ಷಾಗಳು ಮೀಟರ್ ಲೆಕ್ಕದಲ್ಲಿ ಸಂಚರಿಸುವ ಏಕೈಕ ಸ್ಥಳ. ರಿಕ್ಷಾಗಳು ಮೀಟರ್‌ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಭಾರತದ ಉಳಿದ ಭಾಗಗಳು ಲೂಟಿ ಮಾಡುತ್ತವೆ” ಟ್ವಿಟರ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.