ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್-ವೇನಲ್ಲಿ ದ್ವಿಚಕ್ರ ವಾಹನ, ಆಟೊ, ಟ್ರ್ಯಾಕ್ಟರ್ ಹಾಗೂ ಕೃಷಿ ವಾಹನಗಳ ಸಂಚಾರವನ್ನು ನಿಷೇಧಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಮೋಟಾರು ವಾಹನ ಕಾಯ್ದೆಯಡಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ನಿಷೇಧದ ಆದೇಶವು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಪ್ರಾಧಿಕಾರ ಹೇಳಿದೆ.
ಎಕ್ಸ್ಪ್ರೆಸ್-ವೇ ಉದ್ಘಾಟನೆಯಾದ ದಿನದಿಂದಲೇ ಬೈಕ್, ಆಟೋ, ಟ್ರಾಕ್ಟರ್ಗಳ ಸಂಚಾರವನ್ನು ನಿಷೇಧಿಸುವುದಾಗಿ ಪ್ರಾಧಿಕಾರ ಹೇಳಿತ್ತು. ಆದರೆ, ರಸ್ತೆಯ ಸಂಪೂರ್ಣ ಕಾಮಗಾರಿ ಮುಗಿಯದೆ, ನಿರ್ಬಂಧ ಹೇರಬಾರದು ಎಂದು ವಿರೋಧ ವ್ಯಕ್ತವಾಗಿತ್ತು. ಇದೀಗ, ಲಘು ವಾಹನಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಆದರೂ, ರಾಮನಗರ-ಬಿಡದಿ ನಡುವೆ ರೈಲ್ವೇ ಟ್ರಾಕ್ ಬಳಿ ಎಕ್ಸ್ಪ್ರೆಸ್-ವೇಗೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿಲ್ಲ. ಹೀಗಾಗಿ, ಬೈಕ್, ಆಟೋ, ಟ್ರಾಕ್ಟರ್ಗಳು ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.