ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥಾಪನೆಗೊಂಡು ಏಳು ದಶಕ ಪೂರೈಸಿರುವ ಸಂಭ್ರಮದ ಹಿನ್ನೆಲೆಯಲ್ಲಿ ಜೂ.23 ರಿಂದ 26 ರ ವರೆಗೆ ಬೃಹತ್ ರಕ್ತದಾನ ಶಿಬಿರವನ್ನು ಮೈಸೂರು ಆಡಳಿತ ಕಚೇರಿ ವಲಯದಲ್ಲಿ ಆರಂಭಿಸಿದೆ ಎಂದು ಬ್ಯಾಂಕ್ ವೈದ್ಯಾಧಿಕಾರಿ ಡಾ. ವೀಣಾ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಇದಿಷ್ಟು ದಿನ ನಿತ್ಯ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಜಯಲಕ್ಷ್ಮಿಪುರಂ ಎಸ್‌ಬಿಐ ತರಬೇತಿ ಕೇಂದ್ರ ಹಾಗೂ ವರ್ತುಲ ರಸ್ತೆಯ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ದಾನಿಗಳು ತಮಗೆ ಅನುಕೂಲ ಆದ ಕಡೆಗಳಲ್ಲಿ ರಕ್ತ ನೀಡಬಹುದಾಗಿದೆ ಎಂದರು.
ಇದು ದೇಶದಾದ್ಯಂತ ಬ್ಯಾಂಕ್ ನಡೆಸುತ್ತಿರುವ ರಕ್ತದಾನ ಶಿಬಿರವಾಗಿದೆ. ಇದರ ಅಂಗವಾಗಿ ಮೈಸೂರು ಆಡಳಿತ ಕಚೇರಿ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರಗಳಲ್ಲಿಯೂ ನಡೆಯುತ್ತಿದೆ. ಅಗತ್ಯ ಸಂದರ್ಭದಲ್ಲಿ ರಕ್ತ ದೊರೆಯುವುದು ಕಷ್ಟ. ಹೀಗಾಗಿ, ಜನಪರ ಸೇವೆ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಈ ಸಂದರ್ಭದಲ್ಲಿ ಬ್ಯಾಂಕ್ ಹಮ್ಮಿಕೊಂಡಿದೆ. ರಕ್ತ ನೀಡುವವರಿಗೆ ಪ್ರಮಾಣಪತ್ರ, ₹500 ರೂಪಾಯಿಗಳ ಗಿಫ್ಟ್ ವೋಚರ್ ನೀಡಲಾಗುವುದೆಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನಟನ ರಂಗಶಾಲೆಯಲ್ಲಿ ಉಮಾಶ್ರೀ ಅಭಿನಯದ ‘ ಶರ್ಮಿಷ್ಠೆ ‘
ಬ್ಯಾಂಕ್ ಅಧಿಕಾರಿಗಳಾದ ಪ್ರವೀಣ್, ಎಚ್‌ಆರ್‌ಒ ಕಲ್ಯಾಣ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಇದ್ದರು.