ರಾಯಚೂರು | ಮೊಹರಂ ಭಾವೈಕ್ಯದ ಪ್ರತೀಕ

Date:

Advertisements

ಮೊಹರಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದ್ದು, ಭಾವೈಕ್ಯದ ಪ್ರತೀಕವಾಗಿದೆ. ರಾಯಚೂರು ಜಿಲ್ಲೆ ಮುದಗಲ್ ಪಟ್ಟಣ ಹಾಗೂ ಗುರುಗುಂಟ ಗ್ರಾಮದಲ್ಲಿ ನಡೆಯುವ ಆಚರಣೆ ವೀಕ್ಷಣೆಗೆ ರಾಜ್ಯ ಹಾಗೂ ನೆರೆರಾಜ್ಯಗಳ ಸಹಸ್ರಾರು ಭಕ್ತರು ಸೇರಿದ್ದು, ವಿಶೇಷವಾಗಿದೆ.

ಕೋಟೆಯೊಳಗಿನ ದರ್ಗಾ ಬಳಿ ಪೀರ್‌ಗಳ ಸವಾರಿ ವೈಭವದಿಂದ ನಡೆಯುತ್ತದೆ. ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ದರ್ಗಾದ ಮುಂದಿರುವ ಅಲಾವಿ ಕುಣಿತದ ಮುಂದೆ ಯುವಕರು ಹೆಜ್ಜೆ ಹಾಕುತ್ತಾರೆ. ಕರ್‌ಬಲಾ ಕಾಳಗ ಯುದ್ಧದ ಘೋರ ವರ್ಣನೆ, ಅನ್ಯಾಯ, ವಂಚನೆ, ಸಾವು-ನೋವು, ಶೌರ್ಯ-ಬಲಿದಾನಗಳ ಕಥನವನ್ನು ಹಾಡುಗಾರರು ಹಾಡಿ ವರ್ಣಿಸುತ್ತಾರೆ.

ಸಿಂಗಾರ: ಮೊಹರಂ ಅಂಗವಾಗಿ ಪಟ್ಟಣದ ಹಿಂದೂ-ಮುಸ್ಲಿಂ ಸಮುದಾಯದವರು ಮನೆಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಿ ಹಬ್ಬ ಆಚರಿಸುತ್ತಾರೆ. ಹರಕೆ ಹೊತ್ತವರು ಆಲಂಗಳಿಗೆ ಮುಡಿಪು ಅರ್ಪಿಸುತ್ತಾರೆ. ಮುದಗಲ್‌ನ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಪಟ್ಟಣದ ಕೋಟೆ ಹೊರಭಾಗದಲ್ಲಿ ನಡೆಯುವ ಹಸನ್‌-ಹುಸೇನ್‌ ಸಹೋದರರ ಬೆಳ್ಳಿ ಪಂಜಾಗಳ ಮುಖಾಮುಖಿ ದೃಶ್ಯ ಕಣ್ತುಂಬಿಕೊಳ್ಳಲು ದೇಶ-ವಿದೇಶದ ಜನರು ಆಗಮಿಸುತ್ತಾರೆ. ಹಿಜರಿ ಸಂವತ್ಸರದ ಮೊದಲನೇ ತಿಂಗಳು ಹತ್ತು ದಿನಗಳ ಕಾಲ ಮೊಹರಂ ಆಚರಿಸಲಾಗುತ್ತದೆ.

Advertisements

ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುರುಗುಂಟ ಗ್ರಾಮದಲ್ಲಿಯೂ ಕೂಡ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಮೊಹರಂ 7 ನೇ ದಿವಸ ಹುಸೇನ ಆಲಂ ದರ್ಗಾದಿಂದ ಸೈದಖಾಸಿಂ ದರ್ಗಾವರಗೆ ಒಂದು ಎತ್ತು ಕಟ್ಟಿಗೆಯಿಂದ ತುಂಬಿದ 30 ಎತ್ತಿನ ಬಂಡಿಗಳನ್ನು ಎಳೆಯುತ್ತದೆ . ಹಾಗೆಯೇ ಕಟ್ಟಿಗೆಗಳನ್ನು ಸೈದಖಾಸಿಂ ದರ್ಗಾದ ಮುಂದೆ ಹವಾಲಾದಲ್ಲಿ ಹಾಕಿ ಇಡಿ ರಾತ್ರಿ ಸುಡುತ್ತಾರೆ. ಮರುದಿನ ಅಂದರೆ ಮೊಹರಂ 08 ನೇ ದಿನ ಬೆಳಗಿನ ಜಾವ ಆಲಾಯೆ ದೇವರು ಬೆಂಕಿಯನ್ನು ತುಳಿಯುವುದನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಸೇರುತ್ತಾರೆ.

ಇದನ್ನೂ ಓದಿದ್ದೀರಾ? ಗುಲ್ಬರ್ಗಾ ವಿವಿ | ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸದ ಆಡಳಿತ

ದುಡಿಯಲು ವಲಸೆ ಹೋದವರೂ ಕೂಡ ವರ್ಷಕ್ಕೆ ಒಂದು ಬಾರಿ ಮೊಹರಂ ಹಬ್ಬಕ್ಕೆ ತಮ್ಮ ತಮ್ಮ ಊರಿಗೆ ಮರಳುತ್ತಾರೆ. ಮೊಹರಂ ಕೊನೆಯ ಎರಡು ದಿನಗಳು ಮುಸ್ಲಿಂ ಸಮುದಾಯದವರು ರಂಝಾನ್ ಹಬ್ಬದಂತೆ ಉಪವಾಸ ಇರುತ್ತಾರೆ.

ಸತತ 10 ದಿನಗಳ ಕಾಲ ಆಚರಿಸುವ ಮೊಹರಂನಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. 9ನೇ ದಿನ ಹಸನ್‌-ಹುಸೇನ್‌ (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್‌ ಕಾರ್ಯಕ್ರಮ ನಡೆಯುತ್ತವೆ. ಆಲಂ(ದೇವರು)ಗಳ ಕೊನೆಯ ಭೇಟಿ ರೊಮಾಂಚನಕಾರಿಯಾಗಿರುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X