ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಮೆಡಿಕಲ್ ಕಾಲೇಜಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.
ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿ ಇಡಲಾಗಿದೆ.ಸೆಕ್ಷನ್ 75 (2) ಅಡಿಯಲ್ಲಿ ಕೇಸ್ ದಾಖಲಾಗಿದೆ. ಎಸ್ಇ/ಎಸ್ಟಿ ಪಿಒಎ ಆಕ್ಟ್ನಡಿಯಲ್ಲಿ ಎಪ್ಐಆರ್ ದರ್ಜ್ ಆಗಿದೆ. ಸೇಕ್ಷನ್ 75(2 )ಬಿಎನ್ಎಸ್ ಕಾಯ್ದೆಯ ಅಡಿಯಲ್ಲಿ ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿಸುವುದು ಅಪರಾಧವಾಗುತ್ತದೆ. ಒಬ್ಬ ಮಹಿಳೆಯಿಂದ ಲೈಂಗಿಕ ಸಹಕಾರವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕೇಳುವುದು ಅಥವಾ ಬೇಡಿಕೆ ಇಡುವುದು ಅಪರಾಧವಾಗಿದೆ. ಇದು ಯಾವುದೇ ರೂಪದಲ್ಲಿರಬಹುದು. ಈ ಕಾಯ್ದೆಯಡಿಯಲ್ಲಿ ಸದ್ಯ ಕೇಸ್ ದಾಖಲಾಗಿದೆ.
ಕಾಲೇಜಿನ ಸಹ ಪ್ರಾದ್ಯಾಪಕರ ವಿರುದ್ಧ ಈ ಸಂತ್ರಸ್ತೆಯೊಬ್ಬರು ಈ ಆರೋಪ ಮಾಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾಲೇಜಿನ ಈ ಪ್ರಕರಣ ಸಂಬಂಧ ಆಡಳಿತ ಅಧಿಕಾರಿ ಡೀನ್ ವಿರೂಪಾಕ್ಷಪ್ಪ ಹಾಗೂ ಮತ್ತೊಬ್ಬ ಅಧಿಕಾರಿಯಾದ ಉಮಾ ಸದಾಶಿವರವರನ್ನು ನಮ್ಮ ಈದಿನ ಡಾಟ್ ಕಾಮ್ ಸಂಪರ್ಕಿಸಲು ಪ್ರಯತ್ನಿಸಿದ್ದು ಆದರೆ ಸಂಪರ್ಕಕ್ಕೆ ಲಭ್ಯವಾಗಿರುವುದಿಲ್ಲ.