ದ.ಕ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 5 ಮಂದಿ ಸಾವನ್ನಪ್ಪಿದ್ದರೆ, ಇಬ್ಬರು ಗಾಯಗೊಂಡಿದ್ದಾರೆ. ವರುಣನ ಆರ್ಭಟಕ್ಕೆ 35 ಜಾನುವಾರುಗಳು ಬಲಿಯಾಗಿವೆ. ಜಿಲ್ಲೆಯಾದ್ಯಂತ ಒಟ್ಟು 916 ಮನೆಗಳು ಮಳೆಯಿಂದಾಗಿ ಹಾನಿಗೊಂಡಿವೆ. ಈ ಪೈಕಿ 84 ಮನೆಗಳು ಸಂಪೂರ್ಣ ಕುಸಿದು, ಮನೆ ಮಂದಿ ಅತಂತ್ರಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಹಿಂದುತ್ವಕ್ಕೂ ಹಿಂದು ಧರ್ಮಕ್ಕೂ ಸಂಬಂಧವೇ ಇಲ್ಲ: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪ್ರಕಾಶ್
729.4 ಮಿ.ಮೀ ಮಳೆ
ಕರಾವಳಿಯಲ್ಲಿ ಜನವರಿಯಿಂದ ಜೂನ್ 21 ರವರೆಗೆ 1729.4 ಮಿಮೀ ಮಳೆಯಾಗಿದೆ. ಅಂದರೆ ಸರಾಸರಿ ಮಳೆಗಿಂತ ಈ ಬಾರಿ ದುಪ್ಪಟ್ಟು ಮಳೆಯಾಗಿದೆ. 818.5 ಮಿಮೀ ವಾಡಿಕೆ ಮಳೆಯಾಗಿದೆ. ಆದರೆ ಈ ಬಾರಿಯ ಮಳೆ ಸಾಕಷ್ಟು ಹಾನಿಯನ್ನು ಕೂಡ ಮಾಡಿದೆ. ಮೂಡುಬಿದಿರೆಯಲ್ಲಿ 1987.7 ಮಿಮೀ ಮಳೆಯಾಗಿದೆ.
ಇದನ್ನೂ ಓದಿ: ಮಂಗಳೂರು | ಮಹಾನಗರ ಪಾಲಿಕೆಗೆ ಡಿಸಿ ದಿಢೀರ್ ಭೇಟಿ

ಮಳೆಯಿಂದಾಗಿ 7.224 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ. 4,447 ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, 124 ಟ್ರಾನ್ಸ್‌ಫಾರ್ಮ‌್ರಗಳಿಗೆ ಹಾನಿಯಾಗಿದೆ. ವಿವಿಧ ಭಾಗಗಳಲ್ಲಿ 25 ಸೇತುವೆಗಳು ಕುಸಿದಿದ್ದು, 253.24 ಕಿಲೋಮೀಟರ್ ಉದ್ದದ ರಸ್ತೆಗಳು ಹಾಳಾಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ:₹1 ಲಕ್ಷ ಕ್ರೀಡಾ ಪ್ರೋತ್ಸಾಹಧನ; ಸರ್ಕಾರಿ ಶಾಲೆಗಳಿಂದ ಅರ್ಜಿ ಆಹ್ವಾನ
92 ವಿಪತ್ತು ಪೀಡಿತ ಪ್ರದೇಶಗಳು
ಜಿಲ್ಲೆಯಲ್ಲಿ ಒಟ್ಟು 92 ಕಡೆ ಪ್ರವಾಹ ಪೀಡಿತ ಸ್ಥಳಗಳನ್ನು ಗುರುತಿಸಲಾಗಿದೆ. ಬಂಟ್ವಾಳ 11, ಮಂಗಳೂರು, 15, ಮುಲ್ಕಿ 16, ಸುಳ್ಯ 3, ಕಡಬ 7, ಪುತ್ತೂರು, 5, ಬೆಳ್ತಂಗಡಿ 32, ಉಳ್ಳಾಲ 2 ಹೀಗೆ ಹಲವು ಕಡೆಗಳಲ್ಲಿ ಪ್ರವಾಹ ಪೀಡಿತ ಸ್ಥಳಗಳಿದ್ದು, 88 ಸಂಭವೀನಿಯ ಭೂ ಕುಸಿತ ಉಂಟಾಗುವ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 135 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದೆ.
ಆದರೂ, ಕರಾವಳಿ ಭಾಗದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಈ ಬಾರಿ ಮುಂಗಾರು ವಾಡಿಕೆಗಿಂತ ಮೊದಲೇ ಆರಂಭವಾದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ನದಿಗುಳು ತುಂಬಿ ಹರಿಯುತ್ತಿವೆ. ಇತ್ತ ಸಕಾಲದಲ್ಲಿ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ.