ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಗದಗ ಶಹರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ (CPI) ಡಿ.ಬಿ. ಪಾಟೀಲ ಮನೆ ಹಾಗೂ ಕಚೇರಿ ಸೇರಿದಂತೆ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಗದಗ ಶಹರ ಪೊಲೀಸ್ ಠಾಣೆ, ಶಿವಾನಂದ ನಗರದಲ್ಲಿರುವ ಡಿ.ಬಿ. ಪಾಟೀಲ ವಾಸಿಸುತ್ತಿರುವ ಬಾಡಿಗೆ ಮನೆ, ಪಾಟೀಲರ ಮೂಲ ವಾಸಸ್ಥಳಗಳಾದ ಬಾಗಲಕೋಟೆ, ಜಮಖಂಡಿ ಮತ್ತು ಕೆರೂರ ಪ್ರದೇಶದಲ್ಲಿರುವ ಅವರ ಸ್ವಂತ ಮನೆಗಳ ಮೇಲೆಯೂ ಏಕಕಾಲದಲ್ಲಿ ತಪಾಸಣೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಧಿಕಾರ ದುರ್ಬಳಕೆ : ಕೊಳ್ಳೂರ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಮಾನತು
ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ನೇತೃತ್ವದಲ್ಲಿ ಪಿ.ಎಸ್. ಪಾಟೀಲ, ಸಿಪಿಐ ಪರಶುರಾಮ ಕವಟಗಿ ಹಾಗೂ ಲೋಕಾಯುಕ್ತ ವಿಭಾಗದ ಇತರ ಅಧಿಕಾರಿಗಳನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.