ಜುಲೈ 25ರ ರಾಜ್ಯದ ಜಲಾಶಯಗಳ ನೀರಿನ ಮಟ್ಟ : ವಿವರ ಇಲ್ಲಿದೆ

Date:

Advertisements

ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಕರಾವಳಿ ಪ್ರದೇಶಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ, ನದಿಗಳಿಗೆ ಒಳಹರಿವು ಹೆಚ್ಚಾಗಿದ್ದು, ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ.

ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಏರಿಕೆ ಕಂಡಿದ್ದು, ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ (ಕೆಆರ್‌ಎಸ್‌) ನೀರಿನ ಮಟ್ಟ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 100 ಅಡಿ ತಲುಪಿದೆ.

ಕೆಆರ್‌ಎಸ್‌ ಜಲಾಶಯದ ನೀರನ್ನು ಕ್ರಸ್ಟ್‌ ಗೇಟ್‌ಗಳ ಮೂಲಕ ನಾಲೆ, ನದಿಗಳಿಗೆ ಹರಿಸಲಾಗಿದೆ. 24 ಗಂಟೆಯೊಳಗೆ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದ್ದು, 48,025 ಕ್ಯೂಸೆಕ್ ಒಳಹರಿವು, 5449 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಕೆಆರ್‌ಎಸ್‌ ತುಂಬಲು ಗರಿಷ್ಠ ಅಡಿ 124.80 ಇದೆ.

Advertisements

ಜುಲೈ 25ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

  • ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.6 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 123.08 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 62.53 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 97.55 ಟಿಎಂಸಿ ಇತ್ತು. 1,14,445 ಕ್ಯೂಸೆಕ್ ಒಳಹರಿವು ಇದ್ದು, 6981 ಕ್ಯೂಸೆಕ್ ಹೊರಹರಿವು ಇದೆ.
  • ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 497.71 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 105.79 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 25.42 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 105.79 ಟಿಎಂಸಿ ಇತ್ತು. 47,294 ಕ್ಯೂಸೆಕ್ ಒಳಹರಿವು ಇದ್ದು, 296 ಕ್ಯೂಸೆಕ್ ಹೊರಹರಿವು ಇದೆ.
  • ಮಲಫ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 633.8 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 37.73 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 12.70 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 24.21 ಟಿಎಂಸಿ ಇತ್ತು. 21.247 ಕ್ಯೂಸೆಕ್ ಒಳಹರಿವು ಇದ್ದು, 194 ಕ್ಯೂಸೆಕ್ ಹೊರಹರಿವು ಇದೆ.
  • ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ 554.44 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 151.75 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 46.89 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 91.02 ಟಿಎಂಸಿ ಇತ್ತು. 73.505 ಕ್ಯೂಸೆಕ್ ಒಳಹರಿವು ಇದ್ದು, 94 ಕ್ಯೂಸೆಕ್ ಹೊರಹರಿವು ಇದೆ.
  • ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 696.13 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 19.52 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 16.09 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 19.34 ಟಿಎಂಸಿ ಇತ್ತು. 20.749 ಕ್ಯೂಸೆಕ್ ಒಳಹರಿವು ಇದ್ದು, 3333 ಕ್ಯೂಸೆಕ್ ಹೊರಹರಿವು ಇದೆ.
  • ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 657.73 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 33.83 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 69.76 ಟಿಎಂಸಿ ಇತ್ತು. 39,348 ಕ್ಯೂಸೆಕ್ ಒಳಹರಿವು ಇದ್ದು, 170 ಕ್ಯೂಸೆಕ್ ಹೊರಹರಿವು ಇದೆ.
  • ಘಟಪ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 662.91 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 51 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 20.63 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 35.16 ಟಿಎಂಸಿ ಇತ್ತು. 31,815 ಕ್ಯೂಸೆಕ್ ಒಳಹರಿವು ಇದ್ದು, 99 ಕ್ಯೂಸೆಕ್ ಹೊರಹರಿವು ಇದೆ.
  • ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 890.58 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 37.1 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 21.73 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 36.81 ಟಿಎಂಸಿ ಇತ್ತು. 23,142 ಕ್ಯೂಸೆಕ್ ಒಳಹರಿವು ಇದ್ದು, 200 ಕ್ಯೂಸೆಕ್ ಹೊರಹರಿವು ಇದೆ.
  • ವರಾಹಿ ಜಲಾಶಯದ ಗರಿಷ್ಠ ನೀರಿನ ಮಟ್ಟ 594.36 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 31.1 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 6.76 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 7.50 ಟಿಎಂಸಿ ಇತ್ತು. 17,972 ಕ್ಯೂಸೆಕ್ ಒಳಹರಿವು ಇದ್ದು, 23,937 ಕ್ಯೂಸೆಕ್ ಹೊರಹರಿವು ಇದೆ.
  • ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 871.38 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 8.5 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 6.76 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 7.50 ಟಿಎಂಸಿ ಇತ್ತು. 17,972 ಕ್ಯೂಸೆಕ್ ಒಳಹರಿವು ಇದ್ದು, 23,937 ಕ್ಯೂಸೆಕ್ ಹೊರಹರಿವು ಇದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಚಿತ್ರದುರ್ಗ ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಹಾಗೂ ಒಳ ಹರಿವಿನ ಸುದ್ದಿಯನ್ನು ಸಹ ತಾವು ಪ್ರಕಟಿಸಿದರೆ, ಆ ಭಾಗದ ಜನರಿಗೆ ಸಂತೋಷವಾಗುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X