ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನಿಸಿದ ಸಿಂಧನೂರು ವೃತ್ತದ ಡಿವೈಎಸ್‌ಪಿ ಬಿ.ಎಸ್.ತಳವಾರ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ವತಿಯಿಂದ ಎಸ್ಪಿ ಪುಟ್ಟಮಾದಯ್ಯ ಅವರಿಗೆ ನಗರದ ಎಸ್ಪಿ ಕಚೇರಿ ಆವರಣದಲ್ಲಿ ಮನವಿ ಸಲ್ಲಿಸಿದರು.
ಜೂ.23 ರಂದು ಯರಗೇರಾದ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಸುದ್ದಿ ಮಾಡಲು ತೆರಳಿದ್ದ ಬೆಂಕಿ ಬೆಳಕು ಪತ್ರಿಕೆ ವರದಿಗಾರ ಮುತ್ತಣ್ಣ ಹೆಳವರ್‌ಗೆ ಸಿಂಧನೂರು ವೃತ್ತದ ಡಿವೈಎಸ್‌ಪಿ ಬಿ.ಎಸ್.ತಳವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವುದು ತೀವ್ರ ಖಂಡನೀಯವಾಗಿದೆ. ವಿಶ್ವವಿದ್ಯಾಲಯದ ಮುಖ್ಯದ್ವಾರದ ಬಳಿಯಲ್ಲಿ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸುವುದನ್ನು ವರದಿಗಾರ ಮುತ್ತಣ್ಣ ಹೆಳವರ್ ಫೋಟೊ ತೆಗೆಯಲು ನಿಂತಿದ್ದಾಗ ಡಿವೈಎಸ್‌ಪಿ ಬಿ.ಎಸ್.ತಳವಾರ್ ಆಗಮಿಸಿ ಏಕಾಏಕಿ ರೇಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರ್ಯಕ್ರಮದ ವರದಿ ಮಾಡಲು ಜಿಲ್ಲಾಡಳಿತದಿಂದ ಪತ್ರಕರ್ತರಿಗೆ ನೀಡಲಾದ ಪಾಸನ್ನು ತೋರಿಸಿದರೂ ಕೂಡ ಡಿವೈಎಸ್‌ಪಿ ಬಿ.ಎಸ್.ತಳವಾರ್ ಪಕ್ಕದಲ್ಲಿದ್ದ ಸಿಬ್ಬಂದಿಗೆೆ ಇತನನ್ನು ಒದ್ದು ಒಳಗೆ ಹಾಕಿ ಎಂದು ಹೇಳಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದರು.
ವರದಿಗೆ ತೆರಳಿದ ಪತ್ರಕರ್ತನ ಮೇಲೆ ಪೊಲೀಸ್ ಅಧಿಕಾರಿ ದೌರ್ಜನ್ಯ ತೋರಿರುವುದು ಅತ್ಯಂತ ಖಂಡನೀಯವಾಗಿದೆ. ಕೂಡಲೇ ಡಿವೈಎಸ್‌ಪಿ ಬಿ.ಎಸ್.ತಳವಾರ ವಿರುದ್ಧ ಕ್ರಮಕೈಗೊಳ್ಳಬೇಕು. ಪತ್ರಕರ್ತ ಮುತ್ತಣ್ಣ ಹೆಳವರ್ ಜೊತೆಗೆ ಪೊಲೀಸ್ ಅಧಿಕಾರಿ ನಡೆದುಕೊಂಡ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮಕೈಕೊಳ್ಳಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಕಚೇರಿಗಳಿಗೆ ಹೋಗಿ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಧಮಕಿ ಹಾಕಿ ಬ್ಲಾಕ್ ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಪತ್ರಕರ್ತರಲ್ಲದವರು ವಾಹನಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡು ರಾಜಾರೋಷವಾಗಿ ತಿರುಗಾಡಿ ಅಕ್ರಮ ಮರಳು ದಂಧೆ ಮಾಡುವ ನಕಲಿ ಪತ್ರಕರ್ತರು ಇದ್ದಾರೆ. ಬ್ಲಾಕ್ ಮೆಲ್ ದಂಧೆ ಮಾಡುವ ನಕಲಿ ಪತ್ರಕರ್ತರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಜಾಗೃತ ಸಮಾವೇಶ
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಮೂರ್ತಿ ಹಿರೆಮಠ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಪತ್ರಕರ್ತರಾದ ಅರವಿಂದ ಕುಲಕರ್ಣಿ, ಸಿದ್ದು ಬಿರಾದಾರ, ಬಸವರಾಜ ನಾಗಡದಿನ್ನಿ, ಚಂದ್ರಕಾAತ ಮಸಾನಿ, ಮಲ್ಲಿಕಾರ್ಜುನಯ್ಯ ಸ್ವಾಮಿ, ವೀರನಗೌಡ, ರಂಗನಾಥ, ಭೀಮಸೇನಾಚಾರ್, ರಾಮಕೃಷ್ಣ ದಾಸರಿ, ಸಿದ್ದಯ್ಯ ಸ್ವಾಮಿ ಕುಕನೂರು, ವೆಂಕಟೇಶ ಹೂಗಾರ್, ವಿಜಯಕುಮಾರ ಜಾಗಟಗಲ್, ಶ್ರೀಕಾಂತ ಸಾವೂರ್, ಬಸವರಾಜ ಭೋಗಾವತಿ, ಶರಣಬಸವ ನೀರಮಾನ್ವಿ, ನೀಲಕಂಠ ಸ್ವಾಮಿ, ಆನಂದ ಕುಲಕರ್ಣಿ, ಪ್ರಸನ್ನಕುಮಾರ ಜೈನ್ ಜಯಕುಮಾರ ದೇಸಾಯಿ,ಗಿರಿಧರ ಕುಲಕರ್ಣಿ, ಲಕ್ಷö್ಮಣ ಕಪಗಲ್, ಮುತ್ತಣ್ಣ ಹೇಳವರ್, ರಾಚಯ್ಯ ಸ್ವಾಮಿ, ಅಣ್ಣಪ್ಪ ಮೇಟಿಗೌಡ, ಸುದರ್ಶನ, ಗುರುರಾಜ್, ರಾಜು, ಲಕ್ಷö್ಮಣ ಪಾತಾಪೂರ, ಶಾಮಸುಂದರ ಲಂಗೋಟೆ, ಮಹಾನಂದ, ಪ್ರಭಾಕರ್ ಹುಡೇದ್, ಬಾವಾಸಲಿ, ಶಂಕರ, ರಾಮಸ್ವಾಮಿ, ವಾಗೀಶ ಪಾಟೀಲ್, ಶ್ರೀನಿವಾಸ, ಚನ್ನಬಸವ ಅರೋಲಿ, ಹುಸೇನಪ್ಪ, ರವಿಕುಮಾರ, ಛಾಯಾಗ್ರಾಹಕರಾದ ಮಲ್ಲಿಕಾರ್ಜುನಸ್ವಾಮಿ, ಯಲ್ಲಪ್ಪ, ಖಾದರ್, ಜಿಲಾನಿಪಾಷಾ, ಶಿವಕುಮಾರ, ಹನುಮಂತು, ಬಾಲು, ವೀರೇಶ, ಪವನ್‌ಕುಮಾರ, ಅಯ್ಯಪ್ಪ ಪಿಕಲಿಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
