ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಂತೆ ಇರಾನ್ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿ ವಿಫಲವಾಗಿದೆ ಎಂದು ಯುಎಸ್ ಗುಪ್ತಚರ ವರದಿಯಿಂದ ತಿಳಿದುಬಂದಿದೆ.
ಇರಾನ್ ಪರಮಾಣು ತಾಣಗಳ ಮೇಲಿನ ದಾಳಿಯನ್ನು “ಅದ್ಭುತ ಮಿಲಿಟರಿ ಯಶಸ್ಸು ಎಂದು ಕರೆದಿದ್ದ ಟ್ರಂಪ್, ಪರಮಾಣು ತಾಣಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದರು. ವಾಷಿಂಗ್ಟನ್ ಪಡೆಗಳು “ಇರಾನ್ ಪರಮಾಣು ಕಾರ್ಯಕ್ರಮವನ್ನು ಧ್ವಂಸಗೊಳಿಸಿದೆ” ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದರು.
ಆದರೆ, “ಪರಮಾಣು ಯೋಜನೆಗಳಿಗೆ ತೊಂದರೆಯಾಗದಂತೆ ಕಾಪಾಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇರಾನ್‌ನ ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ಸಾಧ್ಯವಾಗಿಲ್ಲ” ಎಂದು ಇರಾನ್ ಸರ್ಕಾರ ತಿಳಿಸಿದೆ.
“ದಾಳಿಯ ವೇಳೆ ರಹಸ್ಯ ಕಟ್ಟಡಗಳನ್ನು ನಾಶಪಡಿಸದೆ ಪರಮಾಣು ತಾಣಗಳ ಪ್ರವೇಶ ದ್ವಾರವನ್ನು ಮಾತ್ರ ನಾಶಪಡಿಸಲಾಗಿದೆ” ಎಂದು ವರದಿಗಳು ಹೇಳಿವೆ.
“ಹಾಗೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ಇರಾನ್ ನ ಪರಮಾಣು ತಾಣಗಳ ದಾಳಿ ನಡೆಸಿದ ಕೆಚ್ಚೆದೆಯ ಪೈಲಟ್ ಗಳನ್ನು ಅಪಖ್ಯಾತಿಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ” ಎಂದು ಲೀವಿಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.