ಮಲೆನಾಡಿನಲ್ಲಿ ಮಳೆ ಹೆಚ್ಚಿದ ಕಾರಣ ಎಲ್ಲೆಡೆ ಗಾಳಿ ಮಳೆಗೆ ಮರಗಳು ನೆಲಕ್ಕೂರುಳುತ್ತಿವೆ. ಹಾಗೆಯೇ, ರಸ್ತೆಯ ಮಧ್ಯೆ ಬೃಹತ್ ಆಕಾರದ ಮರ ಬಿದ್ದು ಆಗುಂಬೆ, ಬಿದರಗೋಡು, ಶೃಂಗೇರಿ ಸಂಚಾರ ಸಧ್ಯಕ್ಕೆ ಬಂದ್ ಆಗಿದೆ.
ಕತ್ತಿಮಸೆ ಹೊಳೆ ಹತ್ತಿರ ಭಾರಿ ಗಾತ್ರದ ಮರ ಬಿದ್ದಿದ್ದು, ಕೊಪ್ಪ-ಶೃಂಗೇರಿ-ಎನ್. ಆರ್. ಪುರ ಮಾರ್ಗ ಬಂದ್ ಆಗಿದೆ. ಈಗಾಗಲೇ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಮರ ತೆರವುಗೊಳಿಸುವ ಕಾರ್ಯ ಆರಂಬಿಸಿದ್ದಾರೆ. ಪ್ರಯಾಣಿಕರಿಗೆ ವಾಹನ ಚಲಾಯಿಸಲು ಕಷ್ಟಕರವಾಗಿದೆ.