ಬಾವಿಗೆ ಬಿದ್ದ ಹಸುವನ್ನು ರಕ್ಷಿಸಲು ಯತ್ನಿಸುತ್ತಿದ್ದ ವೇಳೆ ವಿಷಕಾರಿ ಅನಿಲವನ್ನು ಉಸಿರಾಡಿ ಐವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯ ಧರ್ನವಾಡ ಗ್ರಾಮದಲ್ಲಿ ನಡೆದಿದೆ. ರಾಘೋಗಢ ಉಪವಿಭಾಗದ ವ್ಯಾಪ್ತಿಯ ಖಾಸಗಿ ತೋಟದ ಮನೆಯಲ್ಲಿ ಮಂಗಳವಾರ ನಡೆದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ(SDOP) ದೀಪಾ ದೊಡ್ವೆ, “ಜಮೀನಿನ ಒಳಗೆ ಹಸು ಬಂದಾಗ ಮಕ್ಕಳು ಓಡಿಸಿದ್ದು ಈ ವೇಳೆ ಹಸು ಬಾವಿಗೆ ಬಿದ್ದಿತು. ಇದು 70 ಅಡಿ ಆಳದ ಬಾವಿ. ಪ್ರಾಣಿಯನ್ನು ರಕ್ಷಿಸಲು ಇಬ್ಬರು ಬಾವಿಗೆ ಇಳಿದು ಉಸಿರಾಟದ ತೊಂದರೆಯಿಂದಾಗಿ ಪ್ರಜ್ಞೆ ಕಳೆದುಕೊಂಡು ಹೊರಬರಲು ಸಾಧ್ಯವಾಗಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂ.ಗ್ರಾಮಾಂತರ | ಕೃಷಿ ಹೊಂಡಕ್ಕೆ ಜಾರಿ ಬಿದ್ದ ಮಗಳು; ರಕ್ಷಿಸಲು ಹೋದ ಪೋಷಕರೂ ಸಾವು
“ಇನ್ನೊಬ್ಬ ವ್ಯಕ್ತಿ ಅವರಿಬ್ಬರಿಗೆ ಸಹಾಯ ಮಾಡಲು ಬಾವಿಯೊಳಗೆ ಇಳಿದು, ಉಸಿರಾಡಲಾಗದೆ ಹೊರಬಂದಿದ್ದಾನೆ. ನಂತರ ಇನ್ನೂ ಮೂವರು ಬಾವಿಗೆ ಇಳಿದಿದ್ದು ಪ್ರಜ್ಞೆ ಕಳೆದುಕೊಂಡರು. ಬಾವಿಗೆ ಒಟ್ಟು ಆರು ಮಂದಿ ಇಳಿದಿದ್ದು ಈ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪೊಲೀಸರು, ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ(SDERF) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(NDRF) ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ಐವರು ಮತ್ಯು ಹಸುವನ್ನು ಮೇಲಕ್ಕೆ ತಂದಿದ್ದಾರೆ. ಅಷ್ಟರಲ್ಲೇ ಎಲ್ಲರೂ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
गुना जिले की राघौगढ़ तहसील के धरनावदा गांव में हुए हादसे में पाँच लोगों की मृत्यु अत्यंत दुखद है। मेरी संवेदनाएं शोक संतप्त परिवारजनों के साथ हैं।
— Dr Mohan Yadav (@DrMohanYadav51) June 24, 2025
मैंने प्रभारी मंत्री श्री गोविन्द सिंह राजपूत जी को घटनास्थल पर पहुंचने के निर्देश दिए हैं। मृतकों के निकटतम परिजनों को राज्य शासन…
ಬಾವಿಯಲ್ಲಿ ಅನಿಲ ಸೋರಿಕೆ ಶಂಕೆ ವ್ಯಕ್ತವಾಗಿದ್ದು, ನೀರಿನ ಮಾದರಿಯನ್ನು ಜಿಲ್ಲೆಯ ರಾಷ್ಟ್ರೀಯ ರಸಗೊಬ್ಬರ ಲಿಮಿಟೆಡ್(NFL) ಘಟಕಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
