ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿಗೆ ಕ್ಷಮಾಪಣಾ ಪತ್ರ ಬರೆದಿದ್ದ ಆರ್‌ಎಸ್‌ಎಸ್‌

Date:

Advertisements
ಆರ್‌ಎಸ್‌ಎಸ್‌ ನಾಯಕರು ತಮ್ಮ ಪೂರ್ವಜರು ಇಂದಿರಾ ಗಾಂಧಿಗೆ ಬರೆದ ಪತ್ರಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಇದು, ಸಂಘವನ್ನು ಮತ್ತು ಕಾರ್ಯಕರ್ತರನ್ನು ರಕ್ಷಿಸುವ ತಂತ್ರವೆಂದು ವ್ಯಾಖ್ಯಾನಿಸಿದ್ದಾರೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ (1975-77) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಅವರು ಇಂದಿರಾ ಗಾಂಧಿಯವರಿಗೆ ಎರಡು ಪತ್ರಗಳನ್ನು ಬರೆದಿದ್ದರು. ಪುಣೆಯ ಯರವಾಡ ಜೈಲಲ್ಲಿದ್ದ ದೇವರಸ್‌, ಆ ಪತ್ರಗಳನ್ನು 1975ರ ಆಗಸ್ಟ್ 22 ಮತ್ತು ನವೆಂಬರ್ 10ರಂದು ಬರೆದಿದ್ದರು. ಆದರೆ, ಈ ಪತ್ರಗಳಿಗೆ ಇಂದಿರಾ ಗಾಂಧಿ ಅವರು ಪ್ರತಿಕ್ರಿಯಿಸಿರಲಿಲ್ಲ. ಬಳಿಕ, ದೇವರಸ್ ಅವರು ವಿನೋಬಾ ಭಾವೆ ಅವರಿಗೂ ಎರಡು ಪತ್ರಗಳನ್ನು (1976ರ ಜನವರಿ 12 ಮತ್ತು ಇನ್ನೊಂದು ಪತ್ರದ ದಿನಾಂಕ ತಿಳಿದುಬಂದಿಲ್ಲ) ಬರೆದರು. ತಮ್ಮ ಪತ್ರಗಳಲ್ಲಿ ‘ಇನ್ನೆಂದಿಗೂ ತುರ್ತುಪರಿಸ್ಥಿತಿ ವಿರುದ್ಧದ ಹೋರಾಟಗಳಲ್ಲಿ ಆರ್‌ಎಸ್‌ಎಸ್‌ ಭಾಗಿಯಾಗುವುದಿಲ್ಲ. ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದು ಮನವಿ ಮಾಡಿದ್ದರು.

ಅಂದಹಾಗೆ, 1975ರ ಜೂನ್ 25ರಂದು (ಸರಿಯಾಗಿ 50 ವರ್ಷ) ದೇಶದ ಮೇಲೆ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿಯನ್ನು ಹೇರಿದ್ದರು. ತುರ್ತುಪರಿಸ್ಥಿತಿಯ ವಿರುದ್ಧ ಹಲವಾರು ವಿದ್ಯಾರ್ಥಿ ಚಳವಳಿಗಳು ಹಾಗೂ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಬೃಹತ್ ಹೋರಾಟಗಳು ಭುಗಿಲೆದ್ದವು. ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಆರ್‌ಎಸ್‌ಎಸ್‌ ಕೂಡ ಭಾಗಿಯಾಗಿತ್ತು. ಆ ಸಂದರ್ಭದಲ್ಲಿ ಹೋರಾಟದ ಪ್ರಮುಖರನ್ನೆಲ್ಲ ಬಂಧಿಸಿದ್ದ ಇಂದಿರಾ ಸರ್ಕಾರ, ಬಾಳಾಸಾಹೇಬ್ ದೇವರಸ್‌ ಸೇರಿದಂತೆ ಆರ್‌ಎಸ್‌ಎಸ್‌ನ ಹಲವರನ್ನೂ ಬಂಧಿಸಿತ್ತು. ಮಾತ್ರವಲ್ಲದೆ, ಆರ್‌ಎಸ್‌ಎಸ್‌ಅನ್ನು ಬ್ಯಾನ್‌ ಮಾಡಿತ್ತು.

ಬಂಧನ ಮತ್ತು ತಮ್ಮ ಸಂಘಟನೆಯ ನಿಷೇಧದಿಂದ ಕಂಗಾಲಾಗಿದ್ದ ಆರ್‌ಎಸ್‌ಎಸ್‌ನ ಮುಖ್ಯಸ್ಥ ದೇವರಸ್‌ ಅವರು ತಮ್ಮ ಪರಮಪೂಜ್ಯ ನಾಯಕ ಸಾವರ್ಕರ್‌ ಹಾದಿಯಲ್ಲಿ ಇಂದಿರಾ ಗಾಂಧಿ ಅವರಿಗೆ ಎರಡು ಕ್ಷಮಾಪಣಾ ಪತ್ರಗಳನ್ನು ಬರೆದರು.

Advertisements

1975ರ ಆಗಸ್ಟ್‌ 22ರಂದು ಬರೆದ ಮೊದಲ ಪತ್ರದಲ್ಲಿ: ”ಇಂದಿರಾ ಗಾಂಧಿಯವರು 1975ರ ಆಗಸ್ಟ್ 15ರಂದು ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಜೈಲಿನಲ್ಲಿದ್ದುಕೊಂಡೇ ರೇಡಿಯೊದಲ್ಲಿ ಕೇಳಿದ್ದೇನೆ. ಅವರ ಭಾಷಣವು ‘ಸಮಯೋಚಿತ ಮತ್ತು ಸಂತುಲಿತ’ವಾಗಿದೆ (timely and balanced)” ಎಂದು ಕೊಂಡಾಡಿದ್ದರು.

ಅಲ್ಲದೆ, ”ಆರ್‌ಎಸ್‌ಎಸ್‌ ಮೇಲೆ ಕೇಳಿ ಬಂದಿರುವ ಎಲ್ಲ ಆರೋಪಗಳು ಸುಳ್ಳು. ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯ ಜೊತೆಗೆ ಆರ್‌ಎಸ್‌ಎಸ್‌ ಯಾವುದೇ ಸಂಬಂಧ ಹೊಂದಿಲ್ಲ. ದಯವಿಟ್ಟು, ಆರ್‌ಎಸ್‌ಎಸ್‌ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು. ನೀವು ಸೂಕ್ತವೆಂದು ಭಾವಿಸಿದರೆ ನಿಮ್ಮನ್ನು ಖುದ್ದಾಗಿ ಭೇಟಿಯಾಗಲು ಅವಕಾಶ ಕೊಡಿ. ನಿಮ್ಮನ್ನು ಭೇಟಿ ಮಾಡಲು ಸಂತೋಷ ಮತ್ತು ಕುತೂಹಲಚಕಿತನಾಗಿದ್ದೇನೆ” ಎಂದು ದೇವರಸ್‌ ಬೇಡಿಕೊಂಡಿದ್ದರು.

ಆದಾಗ್ಯೂ, ದೇವರಸ್‌ ಅವರ ಪತ್ರಕ್ಕೆ ಇಂದಿರಾ ಗಾಂಧಿ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ, 1975ರ ನವೆಂಬರ್ 10ರಂದು ಮತ್ತೊಂದು ಪತ್ರ ಬರೆದರು.

ಎರಡನೇ ಪತ್ರದಲ್ಲಿ: ”ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರು ನಿಮ್ಮ ಚುನಾವಣಾ ಆಯ್ಕೆಯನ್ನು (ಗೆಲುವನ್ನು) ಸಾಂವಿಧಾನಿಕವೆಂದು ಘೋಷಿಸಿದ್ದಾರೆ. ನಿಮ್ಮ ಜಯಕ್ಕೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಹೇಳಿದ್ದರು.

ಜೊತೆಗೆ, ಆರ್‌ಎಸ್‌ಎಸ್‌ಗೂ ಜೆಪಿ ಚಳವಳಿಗೂ ಸಂಬಂಧವಿಲ್ಲ ಎಂಬುದನ್ನು ಮತ್ತೊಮ್ಮೆ ಪುನರುಚ್ಚರಿಸಿದ ದೇವರಸ್‌, ”ಜಯಪ್ರಕಾಶ್‌ ನಾರಾಯಣ್ ಅವರ ನೇತೃತ್ವದಲ್ಲಿ ಗುಜರಾತ್ ಮತ್ತು ಬಿಹಾರದಲ್ಲಿ ನಡೆಯುತ್ತಿರುವ ಚಳವಳಿಯೊಂದಿಗೆ ಆರ್‌ಎಸ್‌ಎಸ್‌ ಯಾವುದೇ ಸಂಬಂಧ ಹೊಂದಿಲ್ಲ. ಆರ್‌ಎಸ್‌ಎಸ್‌ ನ ಲಕ್ಷಾಂತರ ಸ್ವಯಂಸೇವಕರ ಸೇವೆಯನ್ನು ಸರ್ಕಾರವು ತನ್ನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದು. ಸರ್ಕಾರದ ಜೊತೆ ಕೆಲಸ ಮಾಡಲು ಆರ್‌ಎಸ್‌ಎಸ್‌ ಸಿದ್ಧವಿದೆ. ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು. ಜೈಲಿನಲ್ಲಿರುವ ಆರ್‌ಎಸ್‌ಎಸ್‌ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು” ಎಂದು ಮತ್ತೊಮ್ಮೆ ಮನವಿ ಮಾಡಿದ್ದರು.

ಈ ಪತ್ರಕ್ಕೂ ಇಂದಿರಾ ಗಾಂಧಿ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ, ದೇವರಸ್ ಅವರು ಪತ್ರ ಬರೆಯುವುದನ್ನು ಮುಂದುವರೆಸಿದರು. ಆದರೆ, ಈ ಬಾರಿ ಇಂದಿರಾ ಗಾಂಧಿ ಅವರ ಬದಲಾಗಿ, ಅವರ ಸಹಚರ ವಿನೋಬಾ ಭಾವೆ ಅವರಿಗೆ ಪತ್ರ ಬರೆದರು.

ಈ ಲೇಖನ ಓದಿದ್ದೀರಾ?: ತುರ್ತು ಪರಿಸ್ಥಿತಿ | ಕತ್ತಲೆಯ ಕಾಲದಲ್ಲಿ ವ್ಯಂಗ್ಯದ ಬೆಳಕು

ಒಂದು ಪತ್ರದಲ್ಲಿ, ಆರ್‌ಎಸ್‌ಎಸ್‌ ಮೇಲಿನ ನಿಷೇಧ ಮತ್ತು ಸಂಘದ ಕಾರ್ಯಕರ್ತರ ಬಿಡುಗಡೆಗಾಗಿ ಇಂದಿರಾ ಗಾಂಧಿ ಅವರ ಮನವೊಲಿಸುವಂತೆ ಮತ್ತು ಆರ್‌ಎಸ್‌ಎಸ್‌ ಸರ್ಕಾರದ ಜೊತೆಗಿರುತ್ತದೆ ಎಂಬುದನ್ನು ತಿಳಿಸುವಂತೆ ಮನವಿ ಮಾಡಿದ್ದರು.

ಮತ್ತೊಂದು ಪತ್ರದಲ್ಲಿ, ಆರ್‌ಎಸ್‌ಎಸ್‌ ವಿಚಾರವಾಗಿ ಇಂದಿರಾ ಗಾಂಧಿ ಅವರಲ್ಲಿರುವ ತಪ್ಪು ತಿಳಿವಳಿಕೆಯನ್ನು ಸ್ಪಷ್ಟ ಮಾಹಿತಿಯೊಂದಿಗೆ ಹೋಗಲಾಡಿಸಲು ಮತ್ತು ಆರ್‌ಎಸ್‌ಎಸ್‌ ಮೇಲಿನ ನಿಷೇಧವನ್ನು ತೆಗೆದುಹಾಕಲು ಪ್ರಯತ್ನಿಸುವಂತೆ ಕೋರಿದ್ದರು. ಅಲ್ಲದೆ, ಇಂದಿರಾ ಗಾಂಧಿ ಅವರು ಜಾರಿಗೊಳಿಸಿದ್ದ 20 ಅಂಶಗಳ ಕಲ್ಯಾಣ ಯೋಜನೆಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದರು.

ದೇವರಸ್‌ ಬರೆದ ಈ ಪತ್ರಗಳನ್ನು ‘ಮಾಫಿನಾಮೆ’ (ಕ್ಷಮೆಯಾಚನೆ ಪತ್ರ) ಮತ್ತು ‘ಶರಣಾಗತಿ’ ಎಂದು ಚಿಂತಕರು ಮತ್ತು ಹಿಂದುತ್ವವನ್ನು ಖಂಡಿಸುವವರು ಬಣ್ಣಿಸಿದ್ದಾರೆ. ಆರ್‌ಎಸ್‌ಎಸ್‌ ತನ್ನ ಸ್ವಾರ್ಥಕ್ಕಾಗಿ ವಿರೋಧಿ ನಿಲುವಿನ ಜೊತೆ ರಾಜಕೀಯ ಒಪ್ಪಂದ/ರಾಜಿಗೆ ಸಿದ್ಧವಾಗಿತ್ತು ಎಂದು ಜರೆದಿದ್ದಾರೆ.

ಆದರೂ, ‘ಜಟ್ಟಿ ಜಾರಿ ಹಳ್ಳಕ್ಕೆ ಬಿದ್ರು ಮೀಸೆ ಮಣ್ಣಾಗಿಲ್ಲ’ ಎಂಬ ಗಾದೆ ಮಾತಿದಂತೆ, ಆರ್‌ಎಸ್‌ಎಸ್‌ ನಾಯಕರು ತಮ್ಮ ಪೂರ್ವಜರು ಬರೆದ ಪತ್ರಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಇದು, ಸಂಘವನ್ನು ಮತ್ತು ಕಾರ್ಯಕರ್ತರನ್ನು ರಕ್ಷಿಸುವ ತಂತ್ರವೆಂದು ವ್ಯಾಖ್ಯಾನಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X