ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಆಂಜನಾದ್ರಿಯಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಸರಣಿಗಳ್ಳತನ ನಡೆದಿದ್ದು, ಕಳ್ಳರು ಸಾಲು ಅಂಗಡಿಗಳ ಬೀಗಗಳನ್ನು ಒಡೆದು ಅದರಲ್ಲಿರುವ ಬೀಡಿ, ಸಿಗರೇಟು, ಗುಟ್ಕಾ, ನಗದನ್ನು ದೋಚಿಕೊಂಡು ಹೋಗಿದ್ದಾರೆ.
ಅಂಜನಾದ್ರಿ ಬೆಟ್ಟಕ್ಕೆ ಬರುವಂತ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ದೇವರ ಫೋಟೋ, ಮಕ್ಕಳ ಆಟಿಕೆ ವಸ್ತುಗಳು ಹಾಗೂ ವಿಗ್ರಹಗಳನ್ನು ಬೇರೆಬೇರೆ ಬೆಲೆಬಾಳುವ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತದೆ. ನೂರಕ್ಕೂ ಹೆಚ್ವು ಸಣ್ಣ ಹಾಗೂ ದೊಡ್ಡ ಪ್ರಮಾಣದ ಅಂಗಡಿಗಳಿವೆ.
“ಇದು ವಾರದಲ್ಲಿ ಎರಡನೇ ಸಲ ಕಳ್ಳತನದ ಘಟನೆ ನಡೆಯುತ್ತಿದ್ದು, ಸರಣಿಗಳ್ಳತನದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದೀಮರು ದರೋಡೆ ಮಾಡಿದ್ದಾರೆ. ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಕಳ್ಳರು ಕಳವು ಮಾಡಲು ಸುಲಭವಾಗಿದೆ. ಬೀಗಗಳನ್ನು ಮುರಿದು ದೋಚಲು ಸುಲಭವಾಗಿದೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ? ವಿಜಯಪುರ | ಅಕ್ರಮವಾಗಿ ಆಧಾರ್ ಕಾರ್ಡ್ ತಿದ್ದುಪಡಿ; ಭೀಮಣ್ಣ ಕೋಟಾರಗಸ್ತಿ ವಿರುದ್ಧ ಕ್ರಮಕ್ಕೆ ಆಗ್ರಹ
ಸ್ಥಳೀಯರು ಅಂಜನಾದ್ರಿ ಬೆಟ್ಟಕೆ ಸಂಪರ್ಕಿಸುವ ಮುಖ್ಯ ರಸ್ತೆಗಳಿಗೆ ವಿದ್ಯತ್ ದೀಪ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಂಬಂಧಿಸಿದ ಇಲಾಖೆ ಇದಕ್ಕಕೆ ಸ್ಪಂಧಿಸಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ.
ದೇವಸ್ಥಾನದ ಕಮಿಟಿ ಕೂಡಲೇ ರಸ್ತೆಗಳಲ್ಲಿ ಸಾಲಾಗಿ ವಿದ್ಯುತ್ ದೀಪ ಅಳವಡಿಸಿಬೇಕು ಹಾಗೂ ಪೋಲೀಸರು 24 ಗಂಟೆಗಳ ಕಾಲ ಬೆಟ್ಟದ ಬಳಿ ಗಸ್ತು ಹೆಚ್ಚಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
.