ವಚನಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಭೂಮಿಯ ಸ್ವಾಧೀನವನ್ನು ವಿರೋಧಿಸಿ ನಡೆಸಿದ ಚಲೋಗೆ ಬಗ್ಗದ ಸಿದ್ದರಾಮಯ್ಯ ಸರ್ಕಾರದಿಂದ ನೂರಾರು ರೈತರ ಬಂಧನ ಮಾಡಲಾಗಿದೆ. ಇಂದು ಬೆಳಿಗ್ಗೆ ಆರಂಭವಾದ ಪ್ರತಿಭಟನೆಯು ಸಂಜೆ ತನಕ ಮುಂದುವರೆಯಿತು. ರೈತರ ಬೇಡಿಕೆಯನ್ನು ಈಡೇರಿಸದ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ತನ್ನ ದಮನಕಾರಿ ನೀತಿಯನ್ನು ತೋರಿಸಿದೆ. ರೈತರು, “ಕೋಟಿ ಕೊಟ್ಟರು ಭೂಮಿ ಬಿಡೆವು” ಜೈಲಿಗೆ ಹಾಕಿ ಎಂದು ಪಟ್ಟು ಹಿಡಿದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.