ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಸ್ಥಳೀಯ ರೈತರ ಜತೆಗೆ ಗದ್ದೆಗಿಳಿದು ಬತ್ತ ನಾಟಿ ಮಾಡುವ ಕಾರ್ಯದಲ್ಲಿ ಭಾಗವಹಿಸಿದರು. ಅಶೋಕನ ಶಿಲಾಶಾಸನ ಪರಿಶೀಲನೆಗೆಂದು ಹೋಗಿ ಹಿಂತಿರುಗುವಾಗ ದಾರಿಮಧ್ಯೆ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಸರ್ಕಾರಿ ಕಚೇರಿಯ ಅಧಿಕಾರಿಗಳು ಅದರಲ್ಲೂ ಉನ್ನತ ಅಧಿಕಾರಿಗಳು ತಮ್ಮ ದಿನ ನಿತ್ಯ ಕಡತಗಳಿಗೆ ಸಹಿ ಹಾಕುವುದು ಹಾಗೂ ಪರಿಶೀಲನೆ ಮಾಡುವ ಜಂಜಾಟದಲ್ಲಿ ತೊಡಗಿ ಸಂಜೆಯೊಳಗೆ ಸುಸ್ತಾಗಿ ಮನೆ ಸೇರಿಕೊಳ್ಳುತ್ತಾರೆ. ಇನ್ನು ಉನ್ನತ ಅಧಿಕಾರಿಗಳಿಗಂತೂ ತಮ್ಮ ಕಚೇರಿಗೆ ಬಂದ ಕೆಳಹಂತದ ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡುವಲ್ಲೇ ಸಮಯ ಮುಗಿದು ಹೋಗುತ್ತದೆ. ಆದರೆ ಬಳ್ಳಾರಿಯ ಎಡಿಸಿ ಜುಬೇರ್ ಅವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅಧಿಕಾರಿಯೊಬ್ಬರು ನಮ್ಮ ಜತೆಗೆ ನಾಟಿ ಕೆಲಸದಲ್ಲಿ ತೊಡಗುತ್ತಾರೆ ಎನ್ನುವುದೇ ನಿರೀಕ್ಷೆಗೂ ಮೀರಿದ್ದು ಎಂದು ಸ್ಥಳೀಯ ರೈತರು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಳ್ಳಾರಿ | ಜೆಎಸ್‌ಡಬ್ಲ್ಯೂ ಕಾರ್ಖಾನೆ ದುರಂತ; ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯ