ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಸಕಲೇಶಪುರ ತಾಲೂಕಿನ ಉಮ್ಮತ್ತೂರು ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ.
ಹಾಸನ ಜಿಲ್ಲೆಯಾದ್ಯಂತ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ, ನೀರಿನ ಹರಿವು ಕೂಡ ಹೆಚ್ಚಾಗಿದ್ದು, ಉಮ್ಮತ್ತೂರು-ಶುಕ್ರವಾರಸಂತೆ ಸಂಪರ್ಕಿಸುವ ಪ್ರಮುಖ ಸೇತುವೆ ಮುಳುಗಡೆಯಾಗಿದೆ.
ಸೇತುವೆ ಮೇಲೆ ರಭಸವಾಗಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಬದಲಿ ರಸ್ತೆಯಿಲ್ಲದೆ ಗ್ರಾಮಸ್ಥರ ಪರದಾಡುವ ಸ್ಥಿತಿ ನಿರ್ಮಾವಾಗಿದೆ. ಬಹುತೇಕ ದೈನಂದಿನ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: ಹಾಸನ | ಶಿರಾಡಿಘಾಟ್‌ನ ಕೆಲವೆಡೆ ಗುಡ್ಡ ಕುಸಿತ; ಕೊಚ್ಚಿ ಹೋದ ತಡೆಗೋಡೆ, ಕೈ ಕೊಟ್ಟ ವಿದ್ಯುತ್