“ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು ಕೂಡಲೇ ಡೊನೇಷನ್ ಹಾವಳಿ ತಡೆಗಟ್ಟಬೇಕು. ಬಡ ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಜರುಗಿಸಬೇಕು” ಎಂದು ಡಿ.ವಿ.ಪಿ ಮುಖಂಡರು ಒತ್ತಾಯಿಸಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಸೂಡಿ ಕ್ರಾಸ್ ಬಳಿ ಮಾನವ ಸರಪಳಿ ನಿರ್ಮಿಸಿ ಖಾಸಗಿ ಶಿಕ್ಷಣ ಸಂಸ್ಥೆ ಡೊನೇಷನ್ ಹಾವಳಿ ತಡೆಗಟ್ಟುವಂತೆ ದಲಿತ ವಿದ್ಯಾರ್ಥಿ ಪರಿಷತ ವತಿಯಿಂದ ಮುಖಂಡರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರಕಾರದ ವಿರುದ್ದ ಘೋಷಣೆ ಕೂಗಿದರು.
“ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಯಿಂದಾಗಿ ಬಡವರು ಕೂಲಿ ಕಾರ್ಮಿಕರು ಅಸಂಘಟಿತ ಕಾರ್ಮಿಕರ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದುಕೊಳ್ಳುವದು ಮರೀಚಿಕೆಯಾಗಿದೆ. ಶೈಕ್ಷಣೀಕ ಕ್ಷೇತ್ರ ಉಳ್ಳವರ ಪಾಲಾಗಿ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ. ದಿನದಿಂದ ದಿನಕ್ಕೆ ಸಾಕಷ್ಟು ಖಾಸಗೀ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿವೆ. ಇದರಿಂದಾಗಿ ಸರ್ಕಾರಿ ಶಾಲೆ ಮುಚ್ಚುವಂತಹ ಪರುಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕೂಡಲೇ ಸರ್ಕಾರ ಸರ್ಕಾರಿ ಆದೇಶದ ಪ್ರಕಾರ ನಿಯಮಿತ ಸರ್ಕಾರಿ ಶುಲ್ಕವನ್ನು ಪಡೆದುಕೊಂಡು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬೇಕು. ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರವೇಶಾತಿ ಶುಲ್ಕದ ದರಪಟ್ಟಿಯನ್ನು ನೋಟೀಸ್ ಬೋರ್ಡ್‌ಗೆ ಲಗತ್ತಿಸಬೇಕು” ಎಂದು ಒತ್ತಾಯಿಸಿರು.

“ರಾಜ್ಯದ ವಿವಿಧ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳು ಶೌಚಾಲಯ. ಶುದ್ದ ಆಹಾರ. ಅಭ್ಯಾಸಕ್ಕೆ ಪೂರಕವಾದ ಸುಸಜ್ಜಿತ ಕೂಠಡಿಗಳನ್ನು ನಿರ್ಮಿಸಬೇಕು. ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯುವಂತೆ ಸರ್ಕಾರ ಕ್ರಮ ಜರುಗಿಸಬೇಕು” ಎಂದು ರೋಣ ತಹಶಿಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ| ಗುತ್ತಿಗೆದಾರನ ಕೊಲೆ ಪ್ರಕರಣ ಆರೋಪಿಗಳ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ, ಜಿಲ್ಲಾ ದಲಿತ ಯುವ ಮುಖಂಡ ವಿಜಯಕುಮಾರ ಚಲವಾದಿ, ಡಿಎಸ್ಎಸ್ ಭೀಮವಾದ ತಾಲೂಕಾಧ್ಯಕ್ಷ ಹನಮಂತ ಚಲವಾದಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಚಲವಾದಿ ಮಹಾಸಭಾ ರೋಣ ತಾಲೂಕಾ ಉಪಾಧ್ಯಕ್ಷ ಅಶೋಕ ತಾಳದವರ, ದಲಿತ ವಿದ್ಯಾರ್ಥಿ ಪರಿಷತ್ ರೋಣ ತಾಲೂಕಾಧ್ಯಕ್ಷ ರಮೇಶ ನಂದಿ, ಉಪಾಧ್ಯಕ್ಷ ಅಂದಪ್ಪ ಮಾದರ, ಪ್ರಧಾನ ಕಾರ್ಯದರ್ಶಿ ಅಭಿಷೇಕ ಕೊಪ್ಪದ, ದಲಿತ ವಿದ್ಯಾರ್ಥಿ ಪರಿಷತ್ ವಿಜಯನಗರ ಜಿಲ್ಲಾಧ್ಯಕ್ಷ ಹನಮೇಶ ರಾಮ್, ಜೈಭೀಮ್ ಸೇನಾ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ, ಜಿಲ್ಲಾ ದಲಿತ ಮುಖಂಡರು ಡಿ.ಜಿ.ಕಟ್ಟಿಮನಿ, ಮಂಜುನಾಥ ಬುರಡಿ, ಮಾರುತಿ ಹಾದಿಮನಿ, ಚಂದ್ರಶೇಖರ ಮಾದರ, ವೀರಪ್ಪ ತೆಗ್ಗಿನಮನಿ, ಮಲ್ಲು ಮಾದರ, ಮಂಜುನಾಥ ದೊಡ್ಡಮನಿ, ಮಾಲತೇಶ ಮಾದರ, ಬಸವರಾಜ ಕಾಳೆ, ಭೀಮಶಿ ಮಾದರ, ಮಹೇಶ ಕುರುಬನಾಳ, ಫಕ್ಕೀರಪ್ಪ ಮಾದರ, ಚಂದ್ರು ಮಾದರ, ಪ್ರಕಾಶ ಮಾದರ, ಯಲ್ಲಪ್ಪ ಹಿರೇಮನಿ, ಸಿದ್ದು ದೊಡ್ಡಮನಿ, ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.