ಛತ್ತೀಸ್‌ಗಢ | ಬಿಜೆಪಿ ಸರ್ಕಾರದಿಂದ 5,000 ಮರಗಳ ಮಾರಣಹೋಮ; ಗ್ರಾಮಸ್ಥರ ಬಂಧನ

Date:

Advertisements

ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಅದಾನಿ ಕಂಪನಿಯ ಎಂಡಿಒಗೆ ನೆರವಾಗಲು ಛತ್ತೀಸ್‌ಗಢದ ಬಿಜೆಪಿ ಸರ್ಕಾರ 5,000 ಮರಗಳ ಮಾರಣಹೋಮಕ್ಕೆ ಕೊಡಲಿ ಇಟ್ಟಿದೆ. ಮರ ಕಡಿಯುವಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಶಾಸಕಿ ಮತ್ತು ಗ್ರಾಮಸ್ಥರನ್ನು ಬಂಧಿಸಿದೆ.

ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ಲೈಲುಂಗಾ ಮತ್ತು ತಮ್ನಾರ್ ಪ್ರದೇಶದ ಗರೆ ಪಾಲ್ಮಾ II ಕಲ್ಲಿದ್ದಲು ಗಣಿಯಲ್ಲಿ ಗಣಿಗಾರಿಕೆಗಾಗಿ ಸಾವಿರಾರು ಬೃಹತ್ ಮರಗಳನ್ನು ಕಡಿಯಲಾಗುತ್ತಿದೆ. ಮರ ಕಡಿಯುವಿಕೆಯನ್ನು ವಿರೋಧಿಸಿ ಮುಂದಗಾಂವ್ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಶಾಸಕಿ ವಿದ್ಯಾವತಿ ಸಿದರ್, ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದು, ಬಳಿಕ ದೂರದ ಸ್ಥಳದಲ್ಲಿ ಬಿಡುಗಡೆ ಮಾಡಿದ್ದಾರೆ.

ಸದ್ಯ, ಲೈಲುಂಗಾ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರನ್ನು ಸ್ಥಳದಿಂದ ಬಲವಂತವಾಗಿ ಓಡಿಸಲಾಗಿದೆ. ಆದರೆ, ತೀವ್ರವಾಗಿ ಪ್ರತಿಭಟಿಸಿದವರನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆ ಮತ್ತು ಸರ್ಕ್ಯೂಟ್ ಹೌಸ್‌ಗೆ ಕರೆದೊಯ್ಯಲಾಗಿದೆ.

Advertisements

ಗುರುವಾರ, ಈ ಪ್ರದೇಶದಲ್ಲಿ ಮರ ಕಡಿಯಲು ಎಂಡಿಒ ಕಂಪನಿಯ ಕಾರ್ಮಿಕರು ಹಾಗೂ ಜೆಸಿಬಿಗಳು ಗ್ರಾಮಗಳಿಗೆ ನುಗ್ಗಿವೆ. ಮರ ಕಡಿಯುವಿಕೆಯನ್ನು ಆರಂಭಿಸುತ್ತಿದ್ದಂತೆಯೇ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಶಾಸಕಿ ವಿದ್ಯಾವತಿ ಸಿದರ್ ಕೂಡ ಸ್ಥಳಕ್ಕೆ ಧಾವಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಉದ್ದೇಶಿತ ಗಣಿಗಾರಿಕೆ ಪ್ರದೇಶದಲ್ಲಿ 9 ಗ್ರಾಮ ಪಂಚಾಯತಿಗಳು, 14 ಹಳ್ಳಿಗಳು ಹಾಗೂ ಒಟ್ಟು 9,500 ಜನರು ವಾಸಿಸುತ್ತಿದ್ದಾರೆ. ಗೇರ್ ಪಾಲ್ಮಾ ಸೆಕ್ಟರ್ II ಕಲ್ಲಿದ್ದಲು ಗಣಿಯಲ್ಲಿ ಗಣಿಗಾರಿಕೆ ನಡೆಸಲು 2019ರಲ್ಲಿ ಗ್ರಾಮ ಸಭೆಗಳನ್ನು ನಡೆಸಲಾಗಿತ್ತು. ಆಗಲೂ ಗಣಿಗಾರಿಕೆಗೆ ವಿರೋಧ ವ್ಯಕ್ತವಾಗಿದ್ದವು. ಆದಾಗ್ಯೂ, 2022ರಲ್ಲಿ ಗಣಿಗಾರಿಕೆಗೆ ಅರಣ್ಯ ಇಲಾಖೆಯೂ ಅನುಮತಿ ಮಂಜೂರು ಮಾಡಿತು. ಬಳಿಕ, ಗ್ರಾಮದ ಪ್ರತಿನಿಧಿಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (NGT) ದೂರು ದಾಖಲಿಸಿದ್ದರು. ಅರಣ್ಯ ಇಲಾಖೆ ನೀಡಿದ್ದ ಅಮತಿಯನ್ನು ಎನ್‌ಜಿಟಿ ರದ್ದುಗೊಳಿಸಿತ್ತು. ಆದರೆ, 2024ರಲ್ಲಿ ಪರಿಸರ ಸಚಿವಾಲಯ ಮತ್ತೊಮ್ಮೆ ಗಣಿಗಾರಿಕೆಗೆ ಅನುಮತಿ ನೀಡಿತು.

“ಛತ್ತೀಸ್‌ಗಢದ ಹಣಕಾಸು ಮತ್ತು ಪರಿಸರ ಸಚಿವ, ರಾಯ್‌ಗಢ ಶಾಸಕ ಒ.ಪಿ ಚೌಧರಿ ಅವರು ತಮ್ನಾರ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರ ಭೇಟಿಯ ಸಂದರ್ಭದಲ್ಲೇ ಮುದಗಾಂವ್‌ನಲ್ಲಿ ದೊಡ್ಡ ಪ್ರಮಾಣದ ಅರಣ್ಯನಾಶ ಪ್ರಾರಂಭವಾಯಿತು” ಎಂದು ರಾಯ್‌ಗಢದ ಪರಿಸರವಾದಿ ರಾಜೇಶ್ ತ್ರಿಪಾಠಿ ಹೇಳಿದ್ದಾರೆ.

ಜೂನ್ 25 ರಂದು, ಸಚಿವ ಚೌಧರಿ ಅವರು ‘ತಾಯಿಯ ಹೆಸರಿನಲ್ಲಿ ಒಂದು ಮರ ನೆಡಿ’ ಅಭಿಯಾನವನ್ನು ಪ್ರಾರಂಭಿಸಿದರು. “ನಾಗರಿಕರು ತಮ್ಮ ತಾಯಂದಿರಿಗೆ ಗೌರವವಾಗಿ ಮತ್ತು ಪರಿಸರವನ್ನು ರಕ್ಷಿಸುವ ಹೆಜ್ಜೆಯಾಗಿ ಮರಗಳನ್ನು ನೆಡಬೇಕು” ಎಂದು ಚೌಧರಿ ಒತ್ತಾಯಿಸಿದ್ದರು.

ಆದರೆ, “ಚೌಧರಿ ತಮ್ನಾರ್‌ಗೆ ಭೇಟಿ ನೀಡಿ ಹೋದ 24 ಗಂಟೆಗಳ ಒಳಗೆಯೇ ಮರಗಳನ್ನು ಉರುಳಿಸುವ ಭಾರೀ ಯಂತ್ರೋಪಕರಣಗಳು ಮುದಗಾಂವ್‌ಗೆ ನುಗ್ಗಿದವು. ದೊಡ್ಡ ಅರಣ್ಯ ಪ್ರದೇಶಗಳನ್ನು ನಾಶಗೊಳಿಸಲು ಆರಂಭಿಸಿದವು” ಎಂದು ತ್ರಿಪಾಠಿ ಆರೋಪಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X