ಕಮ್ಯುನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್‌ನ ತತ್ವ, ಸಿದ್ಧಾಂತಗಳು ಒಂದೇ ನಾಣ್ಯದ 2 ಮುಖಗಳಿದ್ದಂತೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಜಾತ್ಯತೀಯ ತತ್ವವನ್ನು ಹೊಂದಿವೆ ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಕೆ ಬಸವಂತಪ್ಪ ಹೇಳಿದರು.
ದಾವಣಗೆರೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಾನು ಬಡವರ ಪರ ಹೋರಾಟ ಮಾಡಿದ ಕುಟುಂಬದಿಂದ ಬಂದವನು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಬಡವರ ಸಂಕಷ್ಟಗಳಿಗೆ ಸ್ಪಂದಿಸಿದರೆ, ಉತ್ತಮ ಸ್ಥಾನ ದೊರೆಯುವುದು ಶತಸಿದ್ದ. ಕ್ಷೇತ್ರದ ಜನತೆ ನನ್ನ ಕೈ ಹಿಡಿದಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.
“ಸಿಪಿಐ ಹಾಗೂ ನಮ್ಮ ಸಂಬಂಧ ಅವಿನಾಭಾವವಾದುದು. ಪಂಪಾಪತಿ ಅವರ ಕಾಲದಿಂದಲೂ ನಾನು ಸಿಪಿಐ ಒಡನಾಟದಲ್ಲಿದ್ದೇನೆ. ಕಮ್ಯೂನಿಸ್ಟ್ ಪಕ್ಷ ಯಾರಿಗೆ ಶಕ್ತಿ ಇಲ್ಲವೋ, ಯಾರಿಗೆ ಧ್ವನಿ ಇದ್ದಿಲ್ಲವೋ ಅವರಿಗೆ ಶಕ್ತಿ, ಧ್ವನಿ ನೀಡುತ್ತದೆ” ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ರಾಜಾಧ್ಯಕ್ಷ ರಾಜಾಧ್ಯಕ್ಷ ಅವರಗೆರೆ ಹೆಚ್.ಜಿ.ಉಮೇಶ್ ಮಾತನಾಡಿ, “ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಂದ ಪಡೆಯಲಾಗಿರುವ 4,500 ಕೋಟಿ ರೂ. ಹಣ ಇದೆ. ಅಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಕಾರ್ಮಿಕ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಕೃಷಿ, ಹಮಾಲರು ಸೇರಿದಂತೆ ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರ ಸೌಲಭ್ಯಕ್ಕಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಿಪಿಐ ಖಜಾಂಚಿ ಆನಂದರಾಜ್, ಅವರಗೆರೆ ಚಂದ್ರು, ಆವರಗೆರೆ ವಾಸು, ಶಾರದಮ್ಮ, ಸರೋಜ, ರಮೇಶ್, ಲಕ್ಷ್ಮಣ್, ಶಿವಕುಮಾರ್ ಹಾಗೂ ಇತರರು ಇದ್ದರು.