ಅಕ್ಷರ ದಾಸೋಹ ಯೋಜನೆಯಲ್ಲಿ ಅವ್ಯವಹಾರ ಎಸಗಿದ ಆರೋಪದಲ್ಲಿ ಜೇವರ್ಗಿ ತಾಲ್ಲೂಕು ಸಹಾಯಕ ನಿರ್ದೇಶಕಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲ್ಲೂಕು ಸಹಾಯಕ ನಿರ್ದೇಶಕಿ ಮಹಾದೇವಿ ಶಿವಸಿಂಪಿ, ಕೆಎಫ್‌ಸಿಎಸ್‌ಸಿಯ ಈ ಹಿಂದಿನ ವ್ಯವಸ್ಥಾಪಕ ಅಬ್ದುಲ್ ಕರಿಮುಲ್ಲಾ ಹಾಗೂ ಗುತ್ತಿಗೆದಾರನ ಅವ್ಯವಹಾರ ಮಾಡಿರುವ ವ್ಯಕ್ತಿಗಳಾಗಿದ್ದು, ಸರ್ಕಾರಕ್ಕೆ 1.38 ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದಲ್ಲಿ ಅಕ್ಷರ ದಾಸೋಹ ಯೋಜನೆಯ ಶಿಕ್ಷಣ ಅಧಿಕಾರಿ ಈಶ್ವರಪ್ಪ ನೇರಡಗಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.
ಸಹಾಯಕ ನಿರ್ದೇಶಕಿ ಮಹಾದೇವಿ ಶಿವಸಿಂಪಿ ಸೇರಿದಂತೆ ಇತರರು ಕೂಡಿಕೊಂಡು ಬಿಸಿಯೂಟದ ಆಹಾರ ಪದಾರ್ಥಗಳನ್ನು ಜೇವರ್ಗಿ ತಾಲ್ಲೂಕಿನ 163 ಶಾಲೆಗಳಿಗೆ ಸರಬರಾಜು ಮಾಡದೆ ಹಂತ-ಹಂತವಾಗಿ ಬೇರೆ ಕಡೆಗಳಲ್ಲಿ ಸಾಗಿಸಿದ್ದಾರೆ. ಈ ಕುರಿತಾಗಿ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿರುವುದಾಗಿ ತಿಳಿದು ಬಂದಿದೆ.
ಈ ವಿಚಾರ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ | ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ