ಬಲವಂತದ ಕ್ರಮ ಬೇಡ!!! ಇತ್ತೀಚೆಗೆ ಹೆಚ್ಚು ಕೇಳಿಸಿಕೊಂಡ ಸಾಲು
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರುಗಳ ಓವರ್ ಟೇಕ್ ವಿಚಾರದಲ್ಲಿ ಗಲಾಟೆ ಮಾಡಿದ ಆರೋಪದಡಿ ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ ಮತ್ತು ಕಾರು ಚಾಲಕ, ಗನ್ ಮ್ಯಾನ್ ವಿರುದ್ಧ ದಾಬಸ್ ಪೇಟೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈಗ ಅನಂತ್‌ಕುಮಾರ್ ಹೆಗಡೆ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಅಂತ ಹೈಕೋರ್ಟ್ ಗುರವಾರ ತನಿಖಾಧಿಕಾರಿಗಳಿಗೆ ಸೂಚನೆ ನೀಡಿದೆ.
ರಾಜಕೀಯ ಪಕ್ಷಗಳ ಗುಲಾಮಗಿರಿ ಯಲ್ಲಿ ನ್ಯಾಯಾಂಗ ವ್ಯವಸ್ಥೆ ಬರಬಾರದು, ಸಾಮಾನ್ಯ ಜನರಿಗೆ ಇದು ಅನ್ವಯ ಆಗಲ್ಲ ಬಡವರಿಗೆ ಆಗಲ್ಲ, ಜನರಿಗಿಂತ ಹೆಚ್ಚು ಜನಪ್ರತಿನಿಧಿ ಗಳು ಹೆಚ್ಚು ಸಮಾಜಕ್ಕೆ ಆದರ್ಶ ಆಗಿರಬೇಕು, ಜನರಿಗಿಂತ, ಪ್ರತಿನಿಧಿ ಗಳು ಹೆಚ್ಚು ಹಿಂಬಾಲಕರು ಇರ್ತಾರೆ…ಆದ್ದರಿಂದ ನ್ಯಾಯಾಲಯ ಗಳು ರಾಜಕಾರಣಿ ಗಳಿಗೆ ಹೆಚ್ಚು ಶಿಕ್ಷೆ ವಿಧಿಸಬೇಕು, ಅದರಿಂದ ಜನರಿಗೆ ಭಯ ಹಾಗೂ ಅರಿವು ಹೆಚ್ಚು ಅಗತೆ, ಅದ್ರೆ ಇಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದ ರಾಜಕಾರಣಿ ಗಳಿಗೆ “ಬಲಾತ್ಕಾರದ ಕ್ರಮ ಬೇಡ ‘ ಅಂತಾ ಹೇಳುವ ಇವರು ರಾಜಕಾರಿಣಿ ಗಳು ಹೇಗೆ ಏನು ಬೇಕಾದ್ರೂ ಮಾಡಲು ಅನುಮತಿ ನೀಡಿದಂತೆ, ಅವರಿಗೇ ನ್ಯಾಯಾಲದ ಸಹಾಯ ದೊರೆತಂತೆ, ಹಾಗೇ ಅವರ ಹಿಂಬಾಲಕರ ಕತೆನೂ ಹೀಗೆ, ಇವ್ರೆಲ್ಲಾ ಸಮಾಜಕ್ಕೆ ನ್ಯಾಯದಾನ ಮಾಡೋರು….