ಆಕರ್ಷಕ ಬೆಂಗಳೂರು | ಪ್ರಮುಖ ಶಿಫಾರಸುಗಳನ್ನು ಪರಿಗಣಿಸಿ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು: ಜಯರಾಮ್ ರಾಯಪುರ

Date:

Advertisements

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಜನಹಿತ ಅಥವಾ ಆಕರ್ಷಕ ಬೆಂಗಳೂರು ವಿಷಯಾಧಾರಿತವಾಗಿ ಬರುವ ಪ್ರಮುಖ ಶಿಫಾರಸುಗಳನ್ನು ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು ಎಂದು ‘ಆಕರ್ಷಕ ಬೆಂಗಳೂರು’ ನೋಡಲ್ ಅಧಿಕಾರಿ ಜಯರಾಮ್ ರಾಯಪುರ ರವರು ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸರ್ಕಾರ ರಚನೆ ಮಾಡಿರುವ ‘ಆಕರ್ಷಕ ಬೆಂಗಳೂರು’ ಕುರಿತಂತೆ ಬುಧವಾರ ಸಮಿತಿಯ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಆಕರ್ಷಕ ಬೆಂಗಳೂರಿನ ನೋಡಲ್ ಅಧಿಕಾರಿ ಜಯರಾಮ್ ರಾಯಪುರ ಅವರು, “ಆಕರ್ಷಕ ಬೆಂಗಳೂರು ವಿಷಯದಲ್ಲಿ ಮೇಲುಸೇತುವೆಗಳ ಕೆಳಗಿರುವ ಜಾಗವನ್ನು ಜನರ ಅನುಕೂಲಕ್ಕಾಗಿ ಹೇಗೆ ಬಳಸಿಕೊಳ್ಳಬೇಕು. ರಸ್ತೆ ಬದಿ ಆಸನಗಳ ವ್ಯವಸ್ಥೆ, ನಗರದ ಗೋಡೆಗಳ ಮೇಲೆ ನಗರದ ಸಂಸ್ಕೃತಿಯ ಬಗ್ಗೆ ಕಲಾತ್ಮಕವಾಗಿ ಚಿತ್ರಿಸುವುದು, ಪಾರಂಪರಿಕ ತಾಣಗಳ ಚಿತ್ರಣ, ಬೆಂಗಳೂರು/ಸಾಂಸ್ಕೃತಿಕ ಹಬ್ಬಗಳನ್ನು ಮಾಡುವುದು, ಪಾರಂಪರಿಕ ತಾಣಗಳನ್ನು ಪ್ರದರ್ಶಿಸುವ ಆಂಪಿ–ಥಿಯೇಟರ್‌ಗಳ ನಿರ್ಮಾಣ, ಸಾರ್ವಜನಿಕ ಚರ್ಚೆ/ಸಂವಾದಗಳಿಗೆ ತೆರೆದ ಪ್ರದೇಶಗಳ ಬಳಕೆ, ಜನರ ಓದುವ ಹವ್ಯಾಸವನ್ನು ಹೆಚ್ಚಿಸಲು ಪಾಲಿಕೆಯು ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ವಾಚನಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಇನ್ನಿತರೆ ಆಕರ್ಷಕ ವಿಷಯಗಳ ಕುರಿತು ಶಿಫಾರಸು ನೀಡಬೇಕು” ಎಂದು ಸಭೆಯಲ್ಲಿ ಮನವಿ ಮಾಡಿದರು.

Advertisements

“ಬೆಂಗಳೂರನ್ನು ಆಕರ್ಷಕ ನಗರವನ್ನಾಗಿ ರೂಪಿಸುವ ಸಲುವಾಗಿ ಬರುವಂತಹ ಶಿಫಾರಸುಗಳನ್ನು ಒಂದು ತಿಂಗಳ ಅವಧಿಯಲ್ಲಿ ಪರಿಗಣಿಸಿ, ಕನಿಷ್ಠ 20 ಯೋಜನೆಗಳನ್ನು ನಿಗದಿತ ಸಮಯದೊಳಗಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿಬೇಕು. ಅದಕ್ಕೆ ಬೇಕಾದಂತಹ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು” ಎಂದು ಹೇಳಿದರು.

“ಆಕರ್ಷಕ ಬೆಂಗಳೂರನ್ನಾಗಿಸುವ ಸಲುವಾಗಿ ಬರುವಂತಹ ಶಿಫಾರಸುಗಳಲ್ಲಿ ಶಾರ್ಟ್ ಟರ್ಮ್, ಮೀಡಿಯಮ್ ಟರ್ಮ್, ಲಾಂಗ್ ಟರ್ಮ್ ಎಂದು ವಿಂಗಡಿಸಿ ಅದನ್ನು ಇಂತಿಷ್ಟು ದಿನಗಳಲ್ಲಿ ಮುಗಿಸುವ ಯೋಜನೆ ರೂಪಿಸಿಕೊಳ್ಳಬೇಕು. ಈ ಸಂಬಂಧ ಆಕರ್ಷಕ ಬೆಂಗಳೂರಿಗಾಗಿ ರಚಿಸಿರುವ ಪ್ರತ್ಯೇಕ ಸಮಿತಿ ಜತೆಗೆ 2ನೇ ಸಭೆಯನ್ನು ಆಗಸ್ಟ್ 8 ರಂದು ನಿಗಧಿಪಡಿಸಲಾಗಿದೆ. ಆ ಸಭೆಯಲ್ಲಿ ಅಂತಿಮವಾದ ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟು, ಅದಕ್ಕೆ ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಲಾಗುವುದು” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಇಬ್ಬರು ಕಳ್ಳರಿಂದ 18 ಮೊಬೈಲ್, 11 ದ್ವಿಚಕ್ರ ವಾಹನ ವಶಪಡಿಸಿಕೊಂಡ ಪೊಲೀಸರು

ಸಭೆಯಲ್ಲಿ ಬಂದಂತಹ ಪ್ರಮುಖ ಶಿಫಾರಸುಗಳು

  • ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್ ನಿರ್ಮಿಸುವುದು. ಬೆಂಗಳೂರಿನ ಕೇಂದ್ರ ಭಾಗದಲ್ಲಿ ಪಾರಂಪರಿಕ ಕಾರಿಡಾರ್ ನಿರ್ಮಿಸುವುದು.
  • ಬೆಂಗಳೂರಿನ ಉದ್ಯಮಗಳ ಬಗ್ಗೆ ತಿಳಿಸಲು ವಿಜೃಂಭಣೆಯಿಂದ ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಬೆಂಗಳೂರು ಹಬ್ಬವನ್ನು ಆಚರಿಸುವುದು. ಅದೇ ರೀತಿಯಲ್ಲಿ ಜೂನ್ ಅಂತ್ಯದಲ್ಲಿ 7 ದಿನಗಳ ಸಾಂಸ್ಕೃತಿಕ ಉತ್ಸವ ನಡೆಸುವುದು. ಬೆಂಗಳೂರಿನಲ್ಲಿ ಮಾರ್ಚ್ ಮೊದಲ ವಾರದಲ್ಲಿ ಹೂ ಹಬ್ಬವನ್ನು ಆಚರಿಸುವುದು.
  • ಜೆ ಸಿ ರಸ್ತೆಯಲ್ಲಿರುವ ಪಾಲಿಕೆ ಸ್ಥಳದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ಸಭಾಂಗಣ ಹಾಗೂ ಆರ್ಟ್ ಗ್ಯಾಲರಿ ನಿರ್ಮಾಣ ಮಾಡುವುದು.
  • ನಗರದಲ್ಲಿ ಪ್ರಮುಖ ಪಾರಂಪರಿಕ ಕಟ್ಟಡ, ಪರಿಸರ ತಾಣಗಳು, ಪ್ರವಾಸಿ ತಾಣಗಳನ್ನು ಗುರುತಿಸುವುದು ಹಾಗೂ ಇವುಗಳ ಐತಿಹಾಸಿಕತೆಯ ಪರಿಚಯ ಹೇಳುವುದು.
  • ಕೆರೆಗಳ ಹಬ್ಬ, ಪಾರ್ಕ್ ಗಳಲ್ಲಿ ಓಪನ್ ಥಿಯೇಟರ್ ಗಳ ಸಮರ್ಪಕ ಬಳಕೆ, ಥಿಯೇಟರ್ ಹಬ್, ಮಕ್ಕಳಿಗಾಗಿಯೇ ಸಾಂಸ್ಕೃತಿಕ ಹಬ್ ನಿರ್ಮಿಸುವುದು.
  • ಮೇಲುಸೇತುವೆಗಳ ಕೆಳಭಾಗವನ್ನು ನಾನಾ ವಿಷಯಗಳಲ್ಲಿ ಅಭಿವೃದ್ಧಿಪಡಿಸುವುದು.
  • ನಗರದ ವಿವಿಧ ಭಾಗಗಳಲ್ಲಿ ಭಾನುವಾರದಂದು ನಾಲ್ಕು ಫಥಗಳಿರುವ ರಸ್ತೆಯಲ್ಲಿ ಎರಡು ಪಥದಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೆರಡು ಪಥವನ್ನು ಬ್ಲಾಕ್ ಮಾಡಿ ಸಾರ್ವಜನಿಕರಿಂದ ಸಮುದಾಯ ಕಾರ್ಯಕ್ರಮಗಳು/ವಿವಿಧ ಚಟುವಟಿಕೆಗಳನ್ನು ಮಾಡಲು ಅನುವು ಮಾಡುವುದು.

ಸಭೆಯಲ್ಲಿ ಸಮಿತಿಯಲ್ಲಿರುವ ನಗರ ಯೋಜಕರಾದ ನರೇಶ್ ನರಸಿಂಹನ್, ಸಾಮಾಜ ಸೇವಕರಾದ ರಘುನಂದನ್ ರಾಮಣ್ಣ, ತಂತ್ರಜ್ಞಾನರಾದ ಪ್ರಶಾಂತ್ ಪ್ರಕಾಶ್, ಕಲಾ ವಿನ್ಯಾಸಕ ಮತ್ತು ಪಾರಂಪರಿಕ ತಜ್ಞರಾದ ಕೃಷ್ಣಕುಮಾರ್, ಸಾಹಿತಿಯಾದ ಕೆ.ವೈ. ನಾರಾಯಣಸ್ವಾಮಿ, ಕಲಾವಿದರಾದ ಶಶಿಧರ ಭರಿಘಾಟ್, ನಗರ ತಜ್ಞರಾದ ಬಿ. ರವಿಚಂದ್ರನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X