ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿರುವ ಪೊಲೀಸ್ ಠಾಣೆಯ ಕಟ್ಟಡ ಶಿಥಿಲಗೊಂಡಿದ್ದು, ಮೇಲ್ಛವಣಿಯಲ್ಲಿ ಮಳೆ ನೀರು ಸೋರುತ್ತಿದೆ. ಠಾಣೆಯಲ್ಲಿರುವ ಹಲವು ದಾಲಲೆಗಳನ್ನು ರಕ್ಷಿಸುವುದೇ ಪೊಲೀಸ್ ಸಿಬ್ಬಂದಿಗೆ ಸವಾಲಾಗಿದೆ. ಹೀಗಾಗಿ, ಠಾಣೆಯಲ್ಲಿ ಅಧಿಕಾರಿಗಳ ವಸತಿಗೃಹಕ್ಕೆ ಸ್ಥಳಾಂತರಿಸಲಾಗಿದೆ. ಬುಧವಾರ ಶಾಸಕ ಎನ್.ಟಿ ಶ್ರೀನಿವಾಸ್, ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿಥಿಲಗೊಂಡಿರುವ ಕಟ್ಟಡವನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದರೂ, ಇನ್ನೂ ಠಾಣೆಗೆ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆಯಾದರೂ, ಈಗಿರುವ ಸ್ಥಳ ಚಿಕ್ಕದಾಗಿದ್ದು, ಠಾಣೆ ನಿರ್ಮಾಣ ಮಾಡಲು ರಸ್ತೆ ಅಗಲೀಕರಣದ ಭೀತಿಯೂ ಇದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ವಸಂತ ಅಸೋದಿ ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ವಿಸ್ತಾರವಾದ ಜಾಗ ಒದಗಿಸುವಂತೆ ಮನವಿ ಮಾಡಿದ್ದಾರೆ.