(ಮುಂದುವರಿದ ಭಾಗ..) ಜಾತಿಪದ್ಧತಿ ಮತ್ತು ವರ್ಣವ್ಯವಸ್ಥೆಯ ದುಷ್ಟತನ ಕುರಿತು ‘ಜಾತಿ ವಿನಾಶ’ ಕೃತಿಯಲ್ಲಿ ವ್ಯಕ್ತವಾಗಿರುವ ಬಾಬಾಸಾಹೇಬ್ ಅಂಬೇಡ್ಕರರ ಇತರೆ ಕ್ರಾಂತಿಕಾರಿ ವಿಚಾರಗಳು ಹೀಗಿವೆ- ‘ಮಾನವೀಯತೆಯನ್ನು ಅಳಿಸಿ ಹಾಕುವಲ್ಲಿ ಹಿಂದೂ ಧರ್ಮಶಾಸ್ತ್ರಗಳು ಉಂಟು ಮಾಡುವ ಪರಿಣಾಮಗಳನ್ನು ಎತ್ತಿ ಹೇಳುವ ಈ ಕೃತಿ, ಜಾತಿಯ ವೈಜ್ಞಾನಿಕ ನೆಲೆಯನ್ನು ಪ್ರಶ್ನಿಸುತ್ತದೆ. ಜಾತಿನಿಯತ್ತು ಅಥವಾ ಜಾತಿನಿಷ್ಠೆ ಎಂಬುದು ಉಳಿದೆಲ್ಲ ವಿಶಾಲ ನೈತಿಕ ಪರಿಗಣನೆಗಳು-ಪರ್ಯಾಲೋಚನೆಗಳನ್ನು ಅತಿಕ್ರಮಿಸಿ ಕೆಳಕ್ಕೆ ತುಳಿದು ಮೇಲೆದ್ದುಬಿಡುವ ನಿಷ್ಠುರ ಸತ್ಯವನ್ನು ಸಾರುತ್ತದೆ’. ‘ಜಾತಿಯ ತಳಪಾಯದ ಮೇಲೆ ಏನನ್ನೂ ಕಟ್ಟುವುದು ಸಾಧ್ಯವಿಲ್ಲ. ದೇಶವನ್ನು…

ಡಿ ಉಮಾಪತಿ
ಹಿರಿಯ ಪತ್ರಕರ್ತರು