ಮಹಿಳೆಗೆ ಹೆದರಿಸಿ ಮಾಂಗಲ್ಯ ಸರ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಹೇಮಂತ್ ಕುಮಾರ್ (27), ಆಲಂ ಖಾನ್ (30) ಬಂಧಿತ ಆರೋಪಿಗಳು. ಚಿಕ್ಕಮಗಳೂರು ನಗರದ ಮೆಸ್ಕಾಂ ಕಛೇರಿ ಎದುರಿನಲ್ಲಿರುವ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಹೆದರಿಸಿ ಬಲವಂತವಾಗಿ ಅವರ ಕುತ್ತಿಗೆಯಲ್ಲಿದ್ದ, 45 ಗ್ರಾಂ ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ, ಈ ಪ್ರಕರಣ ಕುರಿತು ಪೊಲೀಸ್ ತಂಡವು 24 ಗಂಟೆಯೊಳಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿ ರೂ. 3.40 ಲಕ್ಷ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು l ದೇವನಹಳ್ಳಿ ಚಲೋ: ಹೋರಾಟವನ್ನು ಬೆಂಬಲಿಸಿ ರೈತರು, ಕಾರ್ಮಿಕರಿಂದ ಪ್ರತಿಭಟನೆ
ಈ ವೇಳೆ ಸಿಪಿಐ ಬಸವನಹಳ್ಳಿ ವೃತ್ತ ವಿಜಯಕುಮಾರ ಎಂ ಬಿರಾದಾರ ರವರ ನೇತೃತ್ವದ ಪೊಲೀಸ್ ತಂಡದಲ್ಲಿ ಪಿ.ಎಸ್.ಐ. ಅಜರುದ್ದೀನ್, ಕೀರ್ತಿಕುಮಾರ್, ಪೊಲೀಸ್ ಸಿಬ್ಬಂದಿಗಳಾದ ರವೀಂದ್ರ, ಇಲಿಯಾಸ್, ರಾಜಕುಮಾರ್, ಮಧುಸೂಧನ್, ಲಿಂಗಮೂರ್ತಿ, ಮಾಲತೇಶ, ಸತೀಶ್, ಇಬ್ರಾಹಿಂ, ಚಂದ್ರಶೇಖರ್, ರವಿ ಹಾಗೂ ಇನ್ನಿತರಿದ್ದರು.