ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ವಲಯದ ನೇರಸೆ ಗ್ರಾಮದಲ್ಲಿ ಕಡವೆಯನ್ನು ಅಕ್ರಮವಾಗಿ ಬೇಟೆಯಾಡಿದ ಆರೋಪದ ಮೇಲೆ ಖಾನಾಪುರ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 9 ಮಂದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭ್ಯವಾದ ನಂತರ ಕಾರ್ಯಾಚರಣೆ ನಡೆಸಲಾಯಿತು. ಬಂಧಿತ ಆರೋಪಿಗಳನ್ನು ನೇರಸೆ ಗ್ರಾಮದ ರಂಜಿತ್ ಜೈಸಿಂಗ್ ದೇಸಾಯಿ, ಬಲವಂತ ನಾರಾಯಣ ದೇಸಾಯಿ, ಆತ್ಮಾರಾಮ ಯಲ್ಲಪ್ಪ ದೇವಳಿ ,ಪ್ರಮೋದ ನಾಮದೇವ ದೇಸಾಯಿ , ದತ್ತರಾಜ ವಿಲಾಸಹವಾಲದಾರ ,ಜ್ಞಾನೇಶ ಮಂಗೇಶ ಗಾವಡೆ ,ಗೋವಿಂದ ರಾಮಚಂದ್ರ ದೇಸಾಯಿ, ಅಪ್ಪಿ ಇಂಗಪ್ಪಾ ಹಣಬರ, ಬರಾಪ್ಪಾ ಬಾಬು ಹಣಬರ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ತಂದೆಗೆ ಮಗನಿಂದ ಲಿವರ್ ದಾನ – ಕೆಎಲ್‌ಇ ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆ
ಈ ದಾಳಿಯು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರವರ ಮಾರ್ಗದರ್ಶನದಲ್ಲಿ ನಡೆದಿದೆ. ಕಾರ್ಯಾಚರಣೆಯಲ್ಲಿ ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ, ಖಾನಾಪೂರ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ, ಭೀಮಗಡ ವಲಯದ ಸಯ್ಯದ್‌ಸಾಬ್ ನದಾಫ್, ಲೋಂಡಾ ಉಪ ವಲಯದ ವೈ.ಎಸ್. ಪಾಟೀಲ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು.