ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದ ದೇವಾಲಯದ ಲಡ್ಡು ಪ್ರಸಾದದಲ್ಲಿ ಜಿರಳೆ ಸಿಕ್ಕಿದೆ ಎಂದು ಭಾನುವಾರ ಭಕ್ತರೊಬ್ಬರು ಹೇಳಿಕೊಂಡಿದ್ದಾರೆ. ಸರಶ್ಚಂದ್ರ ಕೆ ಎಂಬವರು ಲಡ್ಡು ಮಧ್ಯದಲ್ಲಿ ಸತ್ತ ಜಿರಳೆ ಇರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಸರಶ್ಚಂದ್ರ ತಕ್ಷಣ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದು ದೂರು ಪತ್ರದಲ್ಲಿ, ಸಿಬ್ಬಂದಿಗಳು ನಿರ್ಲಕ್ಷ್ಯದಿಂದ ಲಡ್ಡುಗಳನ್ನು ತಯಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಆಹಾರದಲ್ಲಿ ಜಿರಳೆ ಪತ್ತೆ: ಪ್ರಶ್ನಿಸಿದ್ದಕ್ಕೆ ಹೈಕೋರ್ಟ್ ವಕೀಲೆ ಮೇಲೆ ಹಲ್ಲೆ
“ಜೂನ್ 29ರಂದು, ನಾನು ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಅಲ್ಲಿ ಲಡ್ಡು ‘ಪ್ರಸಾದ’ದಲ್ಲಿ ಜಿರಳೆ ಸಿಕ್ಕಿದೆ. ದೇವಸ್ಥಾನದ ಲಡ್ಡು ತಯಾರಿಸುವಾಗ ತೋರಿದ ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗಿದೆ. ದಯವಿಟ್ಟು ಗಮನಿಸಿ ಮತ್ತು ಸಮಸ್ಯೆಯನ್ನು ಬಗೆಹರಿಸಿ” ಎಂದು ಸರಶ್ಚಂದ್ರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
శ్రీశైలం లడ్డు ప్రసాదంలో బొద్దింక.. | Cockroach In Srisailam Laddu | Prime9 News#cockroach #ladduprasadam #Srisailam pic.twitter.com/8aZ4psSubp
— Prime9News (@prime9news) June 29, 2025
ಆದರೆ ದೇವಾಲಯದ ಅಧಿಕಾರಿಗಳು ಸರಶ್ಚಂದ್ರ ಅವರ ಆರೋಪವನ್ನು ನಿರಾಕರಿಸಿದ್ದಾರೆ. ಶ್ರೀಶೈಲಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ರಾವ್, “ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡು ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಅದರಲ್ಲಿ ಜಿರಳೆ ಕಂಡುಬರುವ ಸಾಧ್ಯತೆಯಿಲ್ಲ” ಎಂದು ಹೇಳಿದ್ದಾರೆ. ‘ಪ್ರಸಾದ’ದ ಬಗ್ಗೆ ಭಕ್ತರು ಚಿಂತಿಸಬೇಡಿ ಎಂದೂ ಮನವಿ ಮಾಡಿದ್ದಾರೆ.
