ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶಾಲೆಯೊಂದರಲ್ಲಿ ಮೊಬೈಲ್ ಬಳಸುವುದಿಲ್ಲ – ಮೊಬೈಲ್ ನೋಡುವುದಿಲ್ಲ ಎಂಬುದಾಗಿ ಶಾಲಾ ವಿದ್ಯಾರ್ಥಿಗಳು ಪ್ರಮಾಣ ಮಾಡಿರುವ ಘಟನೆ ತೀರ್ಥಹಳ್ಳಿಯ ಶಾಲೆಯೊಂದರಲ್ಲಿ ನಡೆದಿದೆ.
ಪಟ್ಟಣದ ಸೀಬಿನಕೆರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ ಪ್ರಾರ್ಥನೆ ಮಾಡುವ ವೇಳೆ ಮೊಬೈಲ್ ನಿಂದ ಆಗುವ ಅನಾಹುತದ ಬಗ್ಗೆ ಮುಖ್ಯ ಶಿಕ್ಷಕರಾದ ಸಾವಿತ್ರಿ ಮೇಡಂ ತಿಳಿಸಿದ ವೇಳೆ ತಕ್ಷಣವೇನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ಇನ್ನು ಮುಂದೆಮೊಬೈಲ್ ಬಳಸುವುದಿಲ್ಲ – ನೋಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.
ಇತ್ತೀಚಿಗೆ ಮಕ್ಕಳು ಅತೀ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು ಅದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಮೊಬೈಲ್ ಬಳಸುವುದು ಇಲ್ಲ ನೋಡುವುದು ಇಲ್ಲ ಎಂಬ ಪ್ರಮಾಣ ತೀರ್ಮಾನ ಪೋಷಕರಿಗೆ ಖುಷಿ ತರಿಸಿದ್ದು ಅನೇಕ ಪೋಷಕರು ಶಾಲೆಯ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ..