ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಯಲ್ಲಿ ಹಸಿರು ಫೌಂಡೇಶನ್ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ಮಾಡಲು ಭಾನುವಾರ ಚಾಲನೆ ನೀಡಲಾಯಿತು.
ವಾರ್ಷಿಕವಾಗಿ ಸರಾಸರಿ ಒಂದು ಲಕ್ಷ ಗಿಡ ನೆಡುವುದು ಹಸಿರು ಫೌಂಡೇಶನ್ ಗುರಿಯಾಗಿದ್ದು, ದೇವರ ಸನ್ನಿಧಿಯಲ್ಲಿ ಗಿಡ ನೆಡುವು ಮುಖಾಂತರ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯದ ಹಲವು ಕಡೆ ಗಿಡಗಳನ್ನು ಹಾಕುವ ಬಗೆ ಆಸಕ್ತಿ ಇದೆ ಎಂದು ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l 14 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ
ಈ ವೇಳೆ ಗಿರೀಶ್ ಹಳ್ಳಿಬೈಲ್, ಮದನ್ ಹೆಗ್ಡೆ, ಜಗದೀಶ್ ಗೌಡ್ರು ಗುತ್ತಿ, ಮಂಜುನಾಥ್ ಬೆಟ್ಟಗೆರೆ, ನವೀನ್, ಸುರೇಂದ್ರ ಉಗ್ಗೆಹಳ್ಳಿ, ರವಿ ಕುನಹಳ್ಳಿ, ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಸುನಿಲ್ ಊರುಬಗೆ, ಅದೀಪ್, ಸುಮಂತ್, ಪ್ರದೀಪ್, ಪೂರ್ಣೆಶ್, ಶೋಧನ್, ಸಮರ್ಥ್ ಇನ್ನಿತರರಿದ್ದರು.