ನಕಲಿ ಯುಪಿಐ ಪಾವತಿ ಮೂಲಕ ಮೆಡಿಕಲ್ ಮಾಲೀಕರಿಗೆ ವಂಚಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.
ಶೃಂಗೇರಿ ಪಟ್ಟಣದ ಸಂತೆ ಮಾರುಕಟ್ಟೆ ಸಮೀಪದ ಮೆಡಿಕಲ್ ಅಂಗಡಿಯಲ್ಲಿ, ಇಬ್ಬರು ವ್ಯಕ್ತಿಗಳು ಶನಿವಾರ ರಾತ್ರಿ 3,600 ರೂಪಾಯಿ ಮೌಲ್ಯದ ಔಷಧಿ ಮತ್ತು ಇತರ ವಸ್ತುಗಳನ್ನು ಖರೀದಿಸಿ, ನಕಲಿ ಯುಪಿಐ ಆಪ್ ಮೂಲಕ ಸ್ಕ್ಯಾನ್ ಮಾಡಿ ಟ್ರಾನ್ಸಾಕ್ಷನ್ ಐಡಿ ತೋರಿಸಿ ಹಣ ಪಾವತಿಸಿದಂತೆ ನಂಬಿಸಿ ವಂಚನೆ ಮಾಡಲಾಗಿದೆ.
ಮೆಡಿಕಲ್ ಮಾಲೀಕ ಹಣ ಖಾತೆಗೆ ಜಮಾ ಆಗಿಲ್ಲವೆಂದು ಆ ವ್ಯಕ್ತಿಗಳನ್ನು ಕರೆದು ಕೇಳಿದಕ್ಕೆ ಅದೇ ನಕಲಿ ಪಾವತಿ ಐಡಿ ತೋರಿಸಿದ್ದಾರೆ. ಹಣ ಖಾತೆಗೆ ಜಮಾ ಆಗಿರಬೇಕೆಂದು ತಿಳಿದಿದ್ದರು. ಮೆಡಿಕಲ್ ಮಾಲೀಕ ಭಾನುವಾರ ಖಾತೆ ಪರಿಶೀಲನೆ ನಡೆಸಿದಾಗ ವಂಚಿಸಿರುವುದು ದೃಢಪಟ್ಟಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಹಸಿರು ಫೌಂಡೇಶನ್ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ
ಈ ಕುರಿತು ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ವ್ಯಾಪಾರಸ್ಥರು ಇಂತಹ ನಕಲಿ ಯುಪಿಐ ಪಾವತಿಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.