ರಾಯಚೂರು ತಾಲ್ಲೂಕಿನ ಜೇಗರಕಲ್ ಗ್ರಾಮದಲ್ಲಿ ಮಹಿಳೆಯರು ಶೌಚಾಲಯಕ್ಕೆ ಬಳಸುತ್ತಿದ್ದ ಸರ್ಕಾರಿ ಭೂಮಿ ಜಾಗವನ್ನು ಒತ್ತುವರಿ ಮಾಡಿ ಆಕ್ರಮ ಶೆಡ್ ನಿರ್ಮಿಸಿದ್ದಾರೆ. ಕೂಡಲೇ ತೆರವುಗೊಳಿಸಿ ಸಾಮೂಹಿಕ ಶೌಚಾಲಯ ಇಲ್ಲವೇ ಸ್ತ್ರೀ ಶಕ್ತಿ ಭವನ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಖಾಲಿ ಚೊಂಬುಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು ಸ್ತ್ರೀ ಶಕ್ತಿ ಕೂಲಿಕಾರರ ಸಂಘದ ಸಂಚಾಲಕಿ ವಿದ್ಯಾಪಾಟೀಲ್ ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಹೌಸಿಂಗ್ ಬೋರ್ಡಗೆ ಸೇರಿದ ಸರ್ವೇ ಸಂಖ್ಯೆ 198 ಸರ್ಕಾರಿ ಜಮೀನನಲ್ಲಿ ಸುಮಾರು ದಿನಗಳಿಂದ ಮಹಿಳೆಯರು ಶೌಚಾಲಯಕ್ಕೆ ಬಳಸುತ್ತಿದ್ದಾರೆ. ಇತ್ತೀಚಿಗೆ ಗ್ರಾಮದ ಕೆಲವರು ಸರ್ಕಾರಿ ಭೂಮಿಯಲ್ಲಿ ಶೆಡ್ ನಿರ್ಮಿಸಿ ಒತ್ತುವರಿ ಮಾಡುವ ಕೆಲಸ ಪ್ರಾರಂಭಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಒಂದು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದರು.
ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಆಕ್ರಮ ಶೆಡ್ ತೆರವುಗೊಳಿಸಬೇಕು. ಮೂರು ದಿನಗಳ ಕಾಲ ಸಮಯ ನೀಡಲಾಗುತ್ತಿದೆ. ಹಾಗೆ ನಿರ್ಲಕ್ಷದಿಂದ ತೆರವಿಗೆ ಮುಂದಾಗದ ಕಾಲಹರಣ ಮಾಡಿದರೆ ಜೇಗರಕಲ್ ಗ್ರಾಮದಿಂದ ಡಿಸಿ ಕಚೇರಿಯವರಗೆ ಕಾಲ್ನಡಿಗೆ ಜಾಥಾ ನಡೆಸುವುದಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿ ಆದೇಶ
ಈ ಸಂದರ್ಬದಲ್ಲಿ ಆಂಜನೇಯ ಕುರುಬದೊಡ್ಡಿ, ಮಾರೆಮ್ಮ ನೀರಮಾನ್ವಿ , ಜಿಂದಮ್ಮ, ಲಕ್ಷ್ಮಿ, ಅಂಗಡಿ, ಶಾಂಭವಿ, ಬಂಗಾರಿ ನರಸಿಂಹಲು, ಮಹೇಂದ್ರ ಗಾಜರಾಳ, ನರಸಪ್ಪ ಸೇರಿ ಅನೇಕರಿದ್ದರು.
