ವಿಜಯನಗರ | ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ದಲಿತ ಕುಟುಂಬ : ಏನಿದು ಘಟನೆ?

Date:

Advertisements

ಅಸ್ಪ್ರಶ್ಯರು ಮೀಸೆ ಬಿಟ್ಟರೆ, ಮದುವೆ ಸಂದರ್ಭದಲ್ಲಿ ಕುದುರೆ ಏರಿದರೆ, ವಿಜೃಂಭಣೆಯಿಂದ ಮದುವೆ ಆದೆರೆ, ಸುವರ್ಣಿಯರಿಗೆ ನಷ್ಟ ಎಂದರೆ‌ ಅವರ ಶ್ರೇಣಿಗೆ ಅಪಮಾನಿಸಿದಂತೆ. ಆ ಅಪರಾಧಕ್ಕೆ ಶೋಷಿತರು ಪ್ರಾಣ ತೆತ್ತ ಉದಾಹರಣೆಗಳು ಎಣಿಕೆಗೆ ಸಿಗಲಾರದಷ್ಟಿವೆ. ವಿಜಯನಗರ ಹೊಸಪೇಟೆಯ ಇವಿ ಕ್ಯಾಂಪ್‌ನ ದಲಿತ ಮಹಿಳೆಯೊಬ್ಬರ ಆಸ್ತಿಯನ್ನು ಪ್ರತಿಷ್ಠಿತ ವ್ಯಕ್ತಿಯೊಬ್ಬರು ಕಬಳಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಇವಿ ಕ್ಯಾಂಪ್‌ನ ಎಸ್ ಧನಲಕ್ಷ್ಮೀ ಹಾಗೂ ಅವರ ಕುಟುಂಬ ಸಮೂಹಿಕವಾಗಿ ದಯಾಮರಣ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿದ್ದಾರೆ. ಇವಿ ಕ್ಯಾಂಪ್‌ನ ಪ್ರಬಲ ಸಮುದಾಯದ ದೇವುಡು, ನೀಲಮ್ ಠಾಗೋರ್ ಹಾಗೂ ಘಾಳೆಪ್ಪ ಎಂಬುವವರು ದಲಿತ ಕುಟುಂಬದ ಆಸ್ತಿಯನ್ನು ಕಬ್ಜಾ ಮಾಡಿಕೊಂಡು ಎಸ್‌ಸಿ ಕುಟುಂಬದ ಮಹಿಳೆಯರ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ ಎಂದು ದಲಿತ ಕುಟುಂಬದವರು ಆರೋಪಿಸಿಸುತ್ತಿದ್ದಾರೆ.

ಎಸ್.ಲಕ್ಷ್ಮಯ್ಯ ಸುಮಾರು 65 ವರ್ಷಗಳಿಂದ ಹೊಸಪೇಟೆಯ ಇ.ವಿ.ಕ್ಯಾಂಪ್‌ನಲ್ಲಿ‌ವಾಸಿಸುತ್ತಿದ್ದರು. ಲಕ್ಷ್ಮಯ್ಯ ಮಡದಿ ಪಾಪಮ್ಮಳಿಗೆ 7 ಜನ ಮಕ್ಕಳಲ್ಲಿ 4 ಮರಣ ಹೊಂದಿದ್ದು, ಈಗ 3 ಜನ ಮಕ್ಕಳಿದ್ದಾರೆ. ಇವಿ.ಕ್ಯಾಂಪ್‌ನಲ್ಲಿ 55 ವರ್ಷಗಳಿಂದ ಮೀನು ವ್ಯಾಪಾರ ಮಾಡಿಕೊಂಡು ಮಕ್ಕಳನ್ನು ಸಲುಹಿದರು. ಕೆಲವು ವರ್ಷಗಳಿಂದ ವಯೋ ಸಹಜ ಖಾಯಿಲೆಗೆ ತುತ್ತಾಗಿ ಲಕ್ಷ್ಮಯ್ಯ ಸಾವನ್ನಪ್ಪಿದ್ದಾರೆ. ಅವರ ಮಡದಿ ಕೂಡಾ ಕಳೆದ 6 ತಿಂಗಳ ಹಿಂದೆ ಮೃತರಾದರು.

Advertisements

ಎಸ್‌.ಧನಲಕ್ಷ್ಮೀ ಅವರ ತಾಯಿ ಮರಣದ ನಂತರ ನೀಲಮ್ ಠಾಕೋರ್ ಹಾಗೂ ಸಂಬಂಧಗಳು ದಾಖಲೆ ಇಲ್ಲದೆ ಸಾಲ ಹೊರೆಯನ್ನು ಮೃತ ಲಕ್ಷ್ಮಯ್ಯ ಹಾಗೂ ಪಾಪಮ್ಮನ ಮೇಲೆ ಹೊರಿಸಿ ಬಡ್ಡಿಗೆ ಚಕ್ರಬಡ್ಡಿ ಕಟ್ಟಿ ಟಿಬಿಪಿ ಬೋರ್ಡ್‌ನವರು ಕೊಟ್ಟಿರುವ ಖಾಲಿ ಜಾಗ ಸರ್ವೇ ಸಂಖ್ಯೆ 119 ಆಸ್ತಿಯನ್ನು ದಬ್ಬಾಳಿಕೆ ಮಾಡಿ ಕಬ್ಜಾ ಮಾಡಿಕೊಂಡಿದ್ದು, ಈ ಕುರಿತು ಎಸ್.ಲಕ್ಷ್ಮಯ್ಯ ಅವರ ಹೆಣ್ಮಕ್ಕಳು ನಾಗಲಕ್ಷ್ಮೀ ಹಾಗೂ ಧನಲಕ್ಷ್ಮೀ ತಕರಾರು ತೆಗೆದಕ್ಕೆ ಅವರ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ನೊಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಠಾಕೂರ ಅವರ ಕುಟುಂಬ ಸದಸ್ಯರಿಂದ ಹಲ್ಲೆಗೊಳಗಾದ ಮಹಿಳೆಯರು ಠಾಣೆಗೆ ದೂರು ಸಲ್ಲಿಸಿದರೂ ಅವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ . ಧನಲಕ್ಷ್ಮೀ ಅವರ ತಂದೆ ಲಕ್ಷ್ಮಯ್ಯ ಅವರ ಕಾಲದಿಂದಲೂ ಜಾಗ ತೆರಿಗೆಯನ್ನು ಇಂದಿಗೂ ದಲಿತ ಮಹಿಳೆಯರೇ ಕಟ್ಟುತ್ತಾರೆ. ಆದರೆ, ರಾಜಕೀಯ ಪ್ರಬಲ ಹಿನ್ನೆಲೆ ಇರುವ ಠಾಕೂರ ಅವರು ದಾಖಲೇ ಇಲ್ಲದ ಸಾಲದ ನೆಪ ಹೇಳಿ ದಲಿತ ಕುಟುಂಬದ ತಗಡಿನ ಶೆಡ್ ಕಿತ್ತು ದಬ್ಬಾಳಿಕೆ ನಡೆಸಿದ್ದಾರೆ. ಅಲ್ಲದೇ ತಾವು ಜಗಳಕ್ಕೆ ಬಂದರೆ ದಲಿತ ಹಲ್ಲೆಯ ಪ್ರಕರಣ ದಾಖಲಾಗುತ್ತದೆ ಎಂದು ತಮ್ಮ ವಯಸ್ಸಾದ ವೃದ್ಧ ತಾಯಿ-ತಂದೆಯನ್ನು ಮುಂದೆ ಬಿಟ್ಟು ಜಗಳ ಮಾಡಿಸುತ್ತಾರೆ ಎಂದು ನೊಂದ ಮಹಿಳೆಯರು ಹೇಳುತ್ತಾರೆ.

ಠಾಕೂರ ಅವರಿಗೆ ಮಾಜಿ ನಗರಸಭೆಯ ಸದಸ್ಯರೊಬ್ಬರ ಬೆಂಬಲವೂ ಇದ್ದು, ನಿಮಗೆ ಪರಿಹಾರವಾಗಿ 50,000 ರೂ. ಕೊಡುತ್ತೇವೆ, ಅದನ್ನು ಪಡೆದು ಒಪ್ಪಿಕೊಂಡು ಈ ಜಾಗದ ವಿಷಯಕ್ಕೆ ಬರಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಹಲವು ಬಾರಿ ಪೊಲೀಸ್ ಪಿಐ ಜಾಗದ ಮೂಲ ದಾಖಲೆಗಳನ್ನು ಪಡೆದು ಪರಿಶೀಲನೆ ಮಾಡಿದ್ದಾರೆ, ಅದರಲ್ಲಿ ಎಸ್.ಲಕ್ಷ್ಮಯ್ಯ ಅವರ ಹೆಸರಲ್ಲೇ ಇದೆ ಎಂದು ಹೇಳುತ್ತಾರೆ.

ಠಾಕೂರ ಕುಟುಂಬದವರ ಮಾನಸಿಕ ಕಿರುಕುಳ ಹಾಗೂ ದಬ್ಬಾಳಿಕೆಗೆ ಬೇಸತ್ತು ಧನಲಕ್ಷ್ಮೀ ಹಾಗೂ ನಾಗಲಕ್ಷ್ಮೀ ಅವರು ಸಾಮೂಹಿಕವಾಗಿ ದಯಾಮರಣ ಕೋರಿ ರಾಜ್ಯ ಸರಕಾರಕ್ಕೆ ಹಾಗೂ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳು ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.

ಎಸ್.ಧನಲಕ್ಷ್ಮೀ ಈದಿನ.ಕಾಮ್ನೊಂದಿಗೆ ಮಾತನಾಡಿ, ʼಈ ಜಾಗ ಮೊದಲು ನಮ್ಮ ಅಜ್ಜಿ ವರ್ಷಕ್ಕೆ 40 ರೂ. ತೆರಿಗೆ ಕಟ್ಟುತ್ತಿದ್ದರು. ನಂತರ ನಮ್ಮ ತಂದೆ ಎಸ್.ಲಕ್ಷ್ಮಯ್ಯ ನಿವೇಶನದಲ್ಲಿ ಪಡೆದು ಮೀನು ಮಾರಾಟ ಮಾಡುತ್ತಿದ್ದರು. ತಂದೆ ಮೃತರಾದ ಕೆಲ ಕೆಲ ವರ್ಷಗಳ ಬಳಿಕ ತಾಯಿ 6 ತಿಂಗಳದ ಹಿಂದೆ ಮೃತರಾದರು. ಅಲ್ಲಿಯವರೆಗೂ ಠಾಕೂರ್ ಕುಟುಂಬದವರು ಯಾರೂ ಬಂದಿಲ್ಲ. ಅದ್ರೆ , ನಮ್ಮ ತಾಯಿ ಸತ್ತ ಮೇಲೆ ‘ನಿಮ್ಮವ್ವ ಇಷ್ಟ ಸಾವಿರ ಸಾಲ ಪಡೆದಿದ್ದರು. ಅದರ ಅಸಲು, ಬಡ್ಡಿ ಇಷ್ಟಿದೆ ಎಂದು ಸುಳ್ಳು ಹೇಳಿ ನಮ್ಮ ನಿವೇಶನದಲ್ಲಿದ್ದ ಗುಡಿಸಲು ದಬ್ಬಾಳಿಕೆಯಿಂದ ಕಿತ್ತು ಬಿಸಾಕಿದ್ದಾರೆ. ಇದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದಾರೆʼ ಎಂದು ಅಳಲು ತೊಡಿಕೊಂಡರು.

ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ʼನಾವು ಸುಮಾರು 58 ವರ್ಷದಿಂದ ಇಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿಂದ ಇಲ್ಲಿವರೆಗೂ ಯಾರೂ ನಮ್ಮ ಜಾಗ ಎಂದು ಠಾಕೂರ್ ಅವರು ಬಂದಿರಲಿಲ್ಲ ಈಗ 5-6 ತಿಂಗಳದಿಂದ ‘ಲಕ್ಷ್ಮಯ್ಯ ಹಾಗೂ ಪಾಪಮ್ಮ ಮೃತರಾದ ಬಳಿಕ ʼನಿಮ್ಮ ತಂದೆ-ತಾಯಿ ಜಾಗ ಬರೆದುಕೊಟ್ಟು ಸಾಲ ಪಡೆದಿದ್ದರು ಎಂದು ಸುಳ್ಳು ಹೇಳಿ ಜಾಗ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆʼ ಎಂದು ಹೇಳುತ್ತಾರೆ.

ಇದನ್ನೂ ಓದಿ : ವಿಜಯನಗರ | ಸಮಕಾಲೀನ ಕಾವ್ಯಗಳು ನಿವೇದನಾತ್ಮಕವಾಗಿವೆ: ಆರಿಫ್ ರಾಜಾ

ತನಗಾದ ಅನ್ಯಾಯದ ವಿರುದ್ಧ ನ್ಯಾಯಾಲಯಕ್ಕೆ ದೂರು ದಾಖಲಿಸಲು ಶಕ್ತರಿಲ್ಲದ ಕುಟುಂಬವೊಂದು, ಸಂಬಂಧಪಟ್ಟ ಇಲಾಖೆಗಳಿಗೆ ಅಲೆದಾಡಿದರೂ ನ್ಯಾಯ ಸಿಗಲಿಲ್ಲ. ಇವರ ನೋವಿಗೆ ಸ್ಪಂದಿಸದ ಅಧಿಕಾರಿ ವರ್ಗ ಜಾಣ ಕುರುಡರಂತೆ ಸಬೂಬು ಹೇಳಿ‌ ವಾಪಸ್‌ ಕಳಿಸುತ್ತಾರೆ. ಇಬ್ಬರೂ ಅಕ್ಕ-ತಂಗಿ ಹಾಗೂ ಮಕ್ಕಳು ನ್ಯಾಯ ಸಿಗುತ್ತಿಲ್ಲ ಅವರು ಠಾಕೂರ್ ಅವರ ದಬ್ಬಾಳಿಕೆಗೆ ಬೇಸತ್ತು ದಯಾಮರಣ ಕೋರಿದ್ದಾರೆ. ಇನ್ನಾದರೂ ಸಂಬಂಧಿಸಿದ ಇಲಾಖೆಯಾಗಲಿ, ಸರ್ಕಾರವಾಗಲಿ ದಲಿತ ಮಹಿಳೆಯರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬಹುದೇ ಎಂಬುದು ಕಾದು ನೋಡಬೇಕಷ್ಟೇ!

IMG 20241219 WA0001
ಕೇಶವ ಕಟ್ಟಿಮನಿ
+ posts

ಕೃಷಿ, ಪುಸ್ತಕ ಓದುಗ,

ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕೇಶವ ಕಟ್ಟಿಮನಿ
ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ, ಫೀಲ್ಡ್ ಕೋರ್ಡಿನೇಟರ್, ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X